Hiring Reporter’s For more Information Contact Above Number 876 225 4007 . Program producer
Home / Breaking News / ಧಾರವಾಡ: ಕನ್ನಡತಿ ಡಾ.ಮಾಧುರಿಗೆ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್

ಧಾರವಾಡ: ಕನ್ನಡತಿ ಡಾ.ಮಾಧುರಿಗೆ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್

Spread the love

ಧಾರವಾಡ: ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್‌ ಅವರಿಗೆ ಭಾರತೀಯ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್ ಗೌರವಕ್ಕೆ ಪಾತ್ರ​ವಾ​ಗಿದ್ದು, ಲೆಫ್ಟಿ​ನೆಂಟ್‌ ಜನ​ರಲ್‌ ಹುದ್ದೆಗೆ ಬಡ್ತಿ​ ಪ​ಡೆ​ದಿ​ದ್ದಾ​ರೆ. ಈ ಮೂಲಕ ಈ ರೀತಿಯ ತ್ರೀಸ್ಟಾರ್‌ ಗೌರವ ಪಡೆದ ದೇಶದ 3ನೇ ಮಹಿಳಾ ಅಧಿಕಾರಿ ಎಂಬ ಗರಿ​ಮೆಗೆ ಡಾ.ಮಾ​ಧುರಿ ಪಾತ್ರ​ರಾ​ಗಿ​ದ್ದಾ​ರೆ. ಲೆಫ್ಟಿನೆಂಟ್‌ ಜನರಲ್‌ ಪುನೀತಾ ಅರೋರಾ ಮತ್ತು ಏರ್‌ ಮಾರ್ಷಲ್‌ ಪದ್ಮಾ ಬಂಡೋಪಾಧ್ಯಾಯ ಈ ಗೌರವ ಪಡೆದಿರುವ ಇನ್ನಿಬ್ಬರು ಮಹಿಳೆಯರು.

ಡಾ.ಮಾಧುರಿ ಅವ​ರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಪ್ರೇರಣೆ ನೀಡಿ​ದ​ವರು ಅವರ ಮುತ್ತಜ್ಜಿ ಸರಳಾದೇವಿ. ಸರ​ಳಾ​ದೇವಿ ಅವ​ರು 1920ರಲ್ಲಿಯೇ ವೈದ್ಯರಾಗಿ​ದ್ದರು. ಇನ್ನು ಎಂಬಿಬಿಎಸ್‌ ಪದವಿಯ ಮೂರು ಹಂತಗಳಲ್ಲಿ ಉತ್ಕೃಷ್ಟ ದರ್ಜೆಯೊಂದಿಗೆ ಪುಣೆ ವಿವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಹೆಮ್ಮೆ ಮಾಧುರಿ ಕಾನಿಟ್ಕರ್‌ ಅವರದ್ದು.

1982ರಲ್ಲಿ ಪದವಿ ಮುಗಿಸಿದಾಗ ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿಗಳ ಬಂಗಾರ ಪದಕ ಸಹ ಪಡೆದಿದ್ದರು.ಡಾ.ಮಾ​ಧುರಿ ಅವರ ಪತಿ ರಾಜೀವ್‌ ಕಾನಿ​ಟ್ಕರ್‌ ಕೂಡ ಲೆಫ್ಟಿ​ನೆಂಟ್‌ ಜನ​ರಲ್‌ ಆಗಿ ನಿವೃ​ತ್ತಿ​ ಪ​ಡೆ​ದಿ​ದ್ದಾ​ರೆ. ಪತಿ-ಪತ್ನಿ ಇಬ್ಬರೂ ಸೇನಾಪಡೆಯಲ್ಲಿ ಲೆಫ್ಟಿನೆಂಟ್‌ ಜನರಲ್‌ ಹುದ್ದೆ ಅಲಂಕರಿಸಿದ ಅಪರೂಪದ ಜೋಡಿ ಇದು.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!