Hiring Reporter’s For more Information Contact Above Number 876 225 4007 . Program producer
Home / Breaking News / ಧಾರವಾಡ: ಹೋಟೆಲ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಿಲಾಡಿ ಅಜ್ಜನ ಸ್ಟೋರಿ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ

ಧಾರವಾಡ: ಹೋಟೆಲ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಿಲಾಡಿ ಅಜ್ಜನ ಸ್ಟೋರಿ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ

Spread the love

ಧಾರವಾಡ: ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಿ, ಬಿಲ್ ಪಾವತಿಸದೆ ಯಾಮಾರಿಸುತ್ತಿದ್ದ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಿಮೆಂಟ್ಸ್ ಜಾನ್(64) ಬಂಧಿತ ಆರೋಪಿ.

ನಗರದ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಬಿಮೆಂಟ್ಸ್ ಜಾನ್, ಹೋಟೆಲ್​ಗಳಲ್ಲಿ ಉಪಾಹಾರ ಸೇವಿಸಿ ಬಳಿಕ ಹಣ ನೀಡದೆ ಯಾಮಾರಿಸುತ್ತಿದ್ದನಂತೆ. ಇದೇ ರೀತಿಯಲ್ಲಿ ಈ ಕಿಲಾಡಿ ತಾತ ಸುಮಾರು 400 ಹೋಟೆಲ್​ಗಳಿಗೆ ಉಂಡೆನಾಮ ಹಾಕಿದ್ದಾನಂತೆ.

ಸುಮಾರು 12,000 ರೂ. ಬಿಲ್ ಕಟ್ಟದೆ ಯಾಮಾರಿಸಿದ್ದ ವೃದ್ಧ ಅಷ್ಟಕ್ಕೇ ನಿಲ್ಲದೆ ಹೋಟೆಲ್​ನಲ್ಲಿದ್ದ ಲ್ಯಾಪ್​ಟಾಪ್​ ಸಹ ಕದ್ದಿದ್ದನಂತೆ! ಈತನ ಈ ಕೃತ್ಯದಿಂದ ಬೇಸತ್ತ ಹೋಟೆಲ್ ಮಾಲೀಕರು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ದೂರಿನನ್ವಯ ಹುಡುಕಾಟ ಶುರು ಮಾಡಿದ ಪೊಲೀಸರು ಬಿಮೆಂಟ್ಸ್ ಜಾನ್​ನನ್ನು ಬಂಧಿಸಿದ್ದಾರೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!