Hiring Reporter’s For more Information Contact Above Number 876 225 4007 . Program producer
Home / Breaking News / BSY ವಿರುದ್ದ ಡಿಕೆಶಿ ಆರೋಪ

BSY ವಿರುದ್ದ ಡಿಕೆಶಿ ಆರೋಪ

Spread the love

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸಿಬಿಐ ದಾಳಿಗೆ ಕಾರಣ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇರ ಆರೋಪ ಮಾಡಿದ್ದಾರೆ. ಅಲ್ಲದೆ 14 ಕಡೆ 140 ಜನರಿಗೆ ತೊಂದರೆ ಕೊಡಲಾಗ್ತಿದೆ. ನಾವು ಯಾವುದಕ್ಕೂ ಜಗ್ಗಲ್ಲ ಅಂತ ಡಿಕೆ ಬ್ರದರ್ಸ್ ಗುಡುಗಿದ್ದಾರೆ. ಸಿಬಿಐ ದಾಳಿ ಬಗ್ಗೆ ಡಿಕೆ ಬ್ರದರ್ಸ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸಿಬಿಐಗೆ ಅನುಮತಿ ಕೊಡೋದು ಬೇಡ. ಇದರ ಬಗ್ಗೆ ಐಟಿ, ಸಿಐಡಿ ತನಿಖೆ ನಡೆಸಬಹುದು ಅಂತ ಅಡ್ವೋಕೇಟ್ ಜನರಲ್ ತಿಳಿಸಿದರು ಕೂಡ ಸರ್ಕಾರ ಅದ್ಯಾರ ಒತ್ತಡದಿಂದ್ಲೋ ಏನೋ, ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದೆ. ಮುಖ್ಯಮಂತ್ರಿಗಳೇ ನನಗೆ ಎಷ್ಟು ಕಿರುಕುಳ ಕೊಡ್ಬೇಕೋ ಕೊಟ್ಟಿದ್ದೀರಿ. ಕೊರೊನಾ ವೇಳೆ ಸರ್ಕಾರ ಶೇ.400 ಲೂಟಿ ಮಾಡ್ತು.ಇದನ್ನು ಸರ್ಕಾರಕ್ಕೆ ಕೇಳಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ಆದರೆ ನನ್ನ ದನಿ ಮುಚ್ಚೋಕೆ ಆಗಲ್ಲ.

ಡಿಕೆಶಿ ನಿಮ್ಮ ಒತ್ತಡಕ್ಕೆ ಮಣಿಯಲ್ಲ ಅಂದ್ರು. ಈ ತಿಂಗಳ 3ರಂದು ಎಫ್‍ಐಆರ್ ಆಗಿದೆ. ಬೈಎಲೆಕ್ಷನ್‍ನಲ್ಲಿ ನನ್ನನ್ನು ಹಿಂದೆ ಸರಿಸುವ ಪ್ರಯತ್ನ ಇದು. 2024ರ ಚುನಾವಣೆವರೆಗೂ ಮುಂದುವರಿಯುತ್ತೇವೆ. ದಾಳಿಯಲ್ಲಿ ನನ್ನ ಮನೆಯಲ್ಲಿ ಪಂಚೆ, ಪ್ಯಾಂಟು ಶರ್ಟು, ಸೀರೆಗಳ ಲೆಕ್ಕವನ್ನು ಸಿಬಿಐ ತಗೊಂಡಿದೆ. ಇದು ರಾಜಕೀಯ ಕುತಂತ್ರ, ಒತ್ತಡಗಳಿಗೆ ನಾನು ಹೆದರೋ ಮಗ ಅಲ್ಲ ಅಂತಾ ಡಿಕೆ ಶಿವಕುಮಾರ್ ಗುಡುಗಿದ್ರು. ಅಲ್ಲದೆ ತನಿಖೆಗೆ ಕರೆದ್ರೆ ಹೋಗ್ತೇನೆ ಅಂತಲೂ ಹೇಳಿದ್ರು.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!