Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ: ಡಿ.ಕೆ.ಶಿ.

ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ: ಡಿ.ಕೆ.ಶಿ.

 

ಹುಬ್ಬಳ್ಳಿ:ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ.ಯಾರು ಕೂಡ ಇವರಿಗೆ ರಾಜೀನಾಮೆ ಕೊಡಲು ಹೇಳಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜೀನಾಮೆ ನೀಡಿದ್ದಾರೆ.ಆದರೇ ಇಷ್ಟು ದಿನ ರಾಜಕೀಯದಲ್ಲಿ ಅವರು ಮಾಡಿರುವುದಾರು ಏನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮತದಾರರು ಬಿಜೆಪಿಯವರಿಂದ ನೋಟು ತೆಗೆದುಕೊಂಡು ಅನರ್ಹರ ವಿರುದ್ಧ ಮತ ಹಾಕುತ್ತಾರೆ ಎಂದು ಅನರ್ಹರ ವಿರುದ್ಧ ಕಿಡಿ ಕಾರಿದರು.
ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಏನ ಬೇಕಾದರು ಆಗಬಹುದು.ಈಗಾಗಲೇ ಮಹಾರಾಷ್ಟ್ರ, ಹರಿಯಾಣದಲ್ಲಿ ನೋಡಿದ್ದೇವೆ.ಕರ್ನಾಟಕ ಚುನಾವಣೆಯಲ್ಲಿ ಕೂಡ ಏನು ಬೇಕಾದರೂ ಬದಲಾವಣೆ ಆಗಬಹುದು ಎಂದರು.
ಜಾರಿ ನಿರ್ದೇಶನಾಲಯದ ವಿಚಾರಣೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಐಟಿ ಹಾಗೂ ಇಡಿ ಇಲಾಖೆಗೆ ಸ್ವಲ್ಪ ಸಮಯಾವಕಾಶ ಕೇಳಿದ್ದೇನೆ ಆದರೇ ಅವರು ಇಂದೇ ಹಾಜರಾಗಬೇಕು ಎನ್ನುತ್ತಿದ್ದಾರೆ. ನನಗೆ ಉಸಿರಾಡಲು ಬಿಡಿ ಎಂದು ಮನವಿ ಮಾಡಿದ್ದೇನೆ.ನಾನೂ ಕೂಡ ಕಾನೂನಾತ್ಮಕವಾಗಿ ಎಲ್ಲವನ್ನೂ ತಿಳಿದುಕೊಳ್ಳಬೇಕಾಗಿದೆ.ಆದರೇ ಕಾನೂನು ಅವರ ಕೈಯಲ್ಲಿದೇ ಏನ ಬೇಕಾದರು ಮಾಡುತ್ತಾರೆ.ಏನು ಮಾಡಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!