Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ದಿವಂಗತ ಕೃಷ್ಣೇಗೌಡರ ಜಯಂತ್ಯೋತ್ಸವ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

ದಿವಂಗತ ಕೃಷ್ಣೇಗೌಡರ ಜಯಂತ್ಯೋತ್ಸವ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಹಿರಿಯ ನಾಯಕ, ಜನಪರ ಹೋರಾಟಗಾರ,
ರೈತಬಂಧು ಹೆಚ್.ಕೃಷ್ಣೇಗೌಡ ಅವರ 81ನೇ ಜಯಂತ್ಯೋತ್ಸವದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಫಲುಗಳನ್ನು ವಿತರಿಸಲಾಯಿತು.ಸಾರ್ವಜನಿಕರಿಗೆ ಮಜ್ಜಿಗೆ ಪಾನಕ ಹಾಗೂ ಕಾದಂಬರಿಯನ್ನು ಕೃಷ್ಣೇಗೌಡರ ಪುತ್ರರಾದ ಕೆ.ಚಂದ್ರಶೇಖರ್, ಕೆ.ಮಧು, ಕೆ.ಮುರುಳೀಧರ ಮತ್ತು ಕೆ.ಶ್ರೀನಿವಾಸ್ ವಿತರಿಸಿದರು.
ಜನಪರ ಹೋರಾಟಗಾರ ದಿ.ಕೃಷ್ಣೇಗೌಡ ಅವರು
ಪುರಸಭೆಯ ಸದಸ್ಯರಾಗಿ, ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿ ತಾಲೂಕಿನಲ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ. ಅವರ ಹೋರಾಟ ಹಾಗೂ ಸಮಾಜಸೇವೆಯು ನಮಗೆ ಸ್ಪೂರ್ತಿಯ ಚಿಲುಮೆಯಾಗಿದೆ ಎಂದು ಚಂದ್ರಶೇಖರ್ ಸ್ಮರಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಗನ್ನಾಥ್ ಸೇರಿದಂತೆ ನೂರಾರು ಯುವಕರು ಹಣ್ಣು ಹಂಫಲು ವಿತರಣೆಯಲ್ಲಿ ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!