Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯವ್ಯಯ ಮಂಡನಾ ಸಭೆ.‌

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯವ್ಯಯ ಮಂಡನಾ ಸಭೆ.‌

 

ಮಂಡ್ಯ : ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 2019-20ನೇ ಸಾಲಿನ ಆಯವ್ಯಯ ಮಂಡನಾ ಸಭೆಯು
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಂಗಣದ ಆವರಣದಲ್ಲಿ ನಡೆಯಿತು.
ಮಂಡ್ಯ ಜಿಲ್ಲಾ ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಲು ಎಲ್ಲರೂ ಒಂದಾಗಿ ಶ್ರಮಿಸೋಣ, ಜ್ಞಾನದ ಬೆಳಕನ್ನು ನೀಡಿ ವಿದ್ಯಾರ್ಥಿಗಳು ಹಾಗೂ ಯುವಜನರ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಗ್ರಂಥಾಲಯವು ದೇವಾಲಯಕ್ಕಿಂತಲೂ ಶ್ರೇಷ್ಠವಾಗಿದೆ.
ಗ್ರಂಥಾಲಯ ಇಲಾಖೆಗೆ ಮಂಡ್ಯ ನಗರಸಭೆ ಒಂದರಿಂದಲೇ ಎರಡೂವರೆ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸೆಸ್ ಹಣವನ್ನು ಪಾವತಿಸಬೇಕಾಗಿದೆ ಶ್ರೀರಂಗಪಟ್ಟಣ ಪುರಸಭೆಯನ್ನು ಹೊರತುಪಡಿಸಿದರೆ ಜಿಲ್ಲೆಯ ಎಲ್ಲಾ ಪುರಸಭೆಗಳೂ ಲಕ್ಷಗಟ್ಟಲೆ ಗ್ರಂಥಾಲಯ ಕರವನ್ನು ಬಾಕಿ ಉಳಿಸಿಕೊಂಡಿವೆ.
ಈ ಬಗ್ಗೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿ ಗ್ರಂಥಾಲಯ ಸೆಸ್ ಪಾವತಿಸಲು ಮುಂದಾಗಬೇಕು ಎಂದು
ಮಂಡ್ಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕು ಗ್ರಂಥಾಲಯಗಳಿಗೆ ಬಯೋಮೆಟ್ರಿಕ್ ಮಿಷನ್ ಅಳವಡಿಸುವುದು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ವಜ್ರಮುನಿ ಸಭೆಗೆ ಅಗತ್ಯ ಮಾಹಿತಿಯನ್ನು ನೀಡಿದರು.
ಮುಖ್ಯ ಗ್ರಂಥಪಾಲಕರಾದ ನಾಗವೇಣಿ, ಪ್ರಥಮದರ್ಜೆ ಸಹಾಯಕಿ ಪದ್ಮಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷ ತೈಲೂರು ವೆಂಕಟಕೃಷ್ಣ,
ಕೆ.ಆರ್.ಪೇಟೆ ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಶ್ರೀರಂಗಪಟ್ಟಣ. ಪುರಸಭೆಯ ಮಾಜಿಅಧ್ಯಕ್ಷ ಶಿವಾಜಿರಾವ್, ಮಂಡ್ಯ ನಗರಸಭೆಯ ಮಾಜಿಸದಸ್ಯ ಮಂಜು, ಮೂಡಾ ಮಾಜಿಅಧ್ಯಕ್ಷ ಸೋಮಶೇಖರ್,
ಪಾಂಡವಪುರ ಪುಸ್ತಕ ಮನೆಯ ಅಂಕೇಗೌಡ , ಸೇರಿದಂತೆ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು, ಪುರಸಭೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪಾಂಡವಪುರ ಪುಸ್ತಕ ಮನೆಯ ನಿರ್ವಹಣೆಗೆ ಅನುಕೂಲವಾಗುವಂತೆ ವಾರ್ಷಿಕ ಅನುದಾನ ಕೊಡಿಸಿಕೊಡುವಂತೆ ಪಾಂಡವಪುರ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!