Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಮುಸ್ಲಿಂ ಕುಟುಂಬದಿಂದ ದೀಪಾವಳಿ ಆಚರಣೆ : ಭಾವೈಕ್ಯತೆ ಮೂಡಿಸಿದ ಹಬ್ಬದ ಆಚರಣೆ

ಮುಸ್ಲಿಂ ಕುಟುಂಬದಿಂದ ದೀಪಾವಳಿ ಆಚರಣೆ : ಭಾವೈಕ್ಯತೆ ಮೂಡಿಸಿದ ಹಬ್ಬದ ಆಚರಣೆ

ಹುಬ್ಬಳ್ಳಿ:-  ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಈ ಹಬ್ಬವು ಹಿಂದೂಗಳ ಅತಿ ದೊಡ್ಡ ಹಬ್ಬವಾಗಿದ್ದು, ಎಲ್ಲರು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಇದಕ್ಕೆ ತದ್ವಿರುದ್ಧ ಎಂಬುಂತೆ ಮುಸ್ಲಿಂ ಕುಟುಂಬ ಒಂದು ಹಿಂದೂಗಳಿಗೆ ಕಡಿಮೆ ಇಲ್ಲದಂತೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿ ಭಾವೈಕ್ಯತೆ ಸಾರಿದ್ದಾರೆ.

ಹೌದು, ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ನದಾಫ್ ಕುಟುಂಬವೇ ಈ ಭಾವೈಕ್ಯತೆ ಸಾಕ್ಷಿ ಆಗಿದ್ದು, ಇವರು ತಮ್ಮ ಹಿಂದಿನ ತಲೆಮಾರಿನ ಜನರಿಂದಲೂ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ಇಂದು ಕೂಡಾ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ವಾಹನಗಳ ಪೂಜೆ, ಮನೆಯಲ್ಲಿ ಲಕ್ಷ್ಮೀ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಅವರು ಕೆಲಸ ಮಾಡುವ ಸ್ಥಳದಲ್ಲೂ ಹಿಂದೂ – ಮುಸ್ಲಿಂ ಎನ್ನದೇ ಎಲ್ಲರೂ ಒಗ್ಗೂಡಿಕೊಂಡು ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ದೀಪಾವಳಿ ಹಿಂದೂಗಳ ದೊಡ್ಡ ಹಬ್ಬವಾಗಿದೆ. ಅದನ್ನು ಯಾವುದೇ ಭೇದಭಾವವಿಲ್ಲದೇ ಎಂ .ಬಿ.ನದಾಫ್ ಅವರು ಶ್ರದ್ದಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಅವರ ಈ ನಡೆಯನ್ನು ಸಮಾಜದ ಎಲ್ಲರು ಅನುಸರಿಸಿದರೇ ಜಾತೀಯತೆ ಎಂಬುದೇ ಇರುವುದಿಲ್ಲ ಎಂದು ಹೇಳುತ್ತಾರೆ ಅಶೋಕ ಕುಮಾರ.

ಒಟ್ಟಾರೆಯಾಗಿ ಆಧುನಿಕ ದಿನಮಾನಗಳಲ್ಲಿ ಮಾನವೀಯ ಸಂಬಂಧಗಳು ಕಡಿತಗೊಂಡು ಹಬ್ಬ ಹರಿದಿನಗಳ ವಿಶೇಷತೆ ಕ್ಷಿಣಿಸುತ್ತಿರುವ ಈ ಕಾಲದಲ್ಲಿ ಎಂ.ಬಿ.ನದಾಫ ಕುಟುಂಬ ತಲೆ ತಲಾಂತರಗಳಿಂದ ದೀಪಾವಳಿ ಹಬ್ಬವನ್ನು ಯಾವುದೇ ಭೇದಭಾವವಿಲ್ಲದೇ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!