Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ನೆರೆಯಲ್ಲೂ ಸರಳ ರೀತಿಯಲ್ಲಿ ದೀಪಾವಳಿ ಆಚರಣೆ : ಕುಂದದ ಜನರ ಉತ್ಸಾಹ, ಪರಸ್ಪರ ಶುಭಾಶಯ ವಿನಿಮಯ

ನೆರೆಯಲ್ಲೂ ಸರಳ ರೀತಿಯಲ್ಲಿ ದೀಪಾವಳಿ ಆಚರಣೆ : ಕುಂದದ ಜನರ ಉತ್ಸಾಹ, ಪರಸ್ಪರ ಶುಭಾಶಯ ವಿನಿಮಯ

ಹುಬ್ಬಳ್ಳಿ:-ಬೆಳಕಿನ ಹಬ್ಬ ದೀಪಾವಳಿಯನ್ನು ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ರವಿವಾರ ಆಚರಣೆ ಮಾಡಿದರೇ, ಮತ್ತೆ ಕೆಲವು ಭಾಗದಲ್ಲಿ ಇಂದು ಮತ್ತು ನಾಳೆ ಸಾರ್ವಜನಿಕರು ಸಂಭ್ರಮದಿಂದ ಆಚರಿಸಲಿದ್ದಾರೆ.
ಬೆಳಕಿನ ಹಬ್ಬದ ಪ್ರಯಕ್ತ ನಗರದ ಜನತಾ ಬಜಾರ, ದುರ್ಗದ ಬಯಲು, ಹಳೇಹುಬ್ಬಳ್ಳಿ ಮಾರುಕಟ್ಟೆ, ಗಾಂಧಿ ಮಾರ್ಕೆಟ್ ಗಳಲ್ಲಿ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆಎಲೆ, ಕಂದುಗಳ ವ್ಯಾಪಾರ ಜೋರಾಗಿಯೇ ಇತ್ತು. ನಗರದ ಚೆನ್ನಮ್ಮ ವೃತ್ತ, ಈದ್ಗಾ ಮೈದಾನ, ಬಂಕಾಪುರಚೌಕ ಸೇರಿದಂತೆ ಮುಂತಾದ ಕಡೆಗಳಲ್ಲಿ ಬಾಳೆ, ಕಬ್ಬು, ಚೆಂಡು ಹೂ ಗಿಡಗಳ ಮಾರಾಟ ಜೋರಾಗಿತ್ತು. ಇನ್ನೂ ನೆಹರೂ ಮೈದಾನದ ಸೇರಿದಂತೆ ನಾನಾ ಕಡೆ ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಸಿಡಿಮದ್ದು ಹಾಗೂ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ದೃಶ್ಯ ಕಂಡುಬಂತು.
ದೇವಾಲಯಗಳಲ್ಲಿ ವಿಶೇಷ ಪೂಜೆ:ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ದಾರೋಢ ಮಠ, ಮೂರುಸಾವಿರ ಮಠ, ಗಬ್ಬೂರ ಬಸವಣ್ಣ ಸೇರಿದಂತೆ ಮಠ ಮಂದಿರಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಇನ್ನೂ ನಗರದ ನಾನಾ ಬಡಾವಣೆಗಳ ಲಕ್ಷ್ಮೀ ದೇವಾಲಯ, ಗಣೇಶ ದೇವಸ್ಥಾನ, ಆಂಜನೇಯಸ್ವಾಮಿ ದೇವಾಲಯ, ಕೃಷ್ಣ ಮಂದಿರ, ಸಾಯಿ ಬಾಬಾ ಮಂದಿರ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ, ಮನೆ ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಸ್ಥಾನ ಹಾಗೂ ಮನೆಗಳಲ್ಲಿ ಮಣ್ಣಿನ ದೀಪ ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇನ್ನೂ ಅದರಂತೆ ಇಂದು ಕೂಡಾ ಹಬ್ಬದ ಆಚರಣೆ ನಡೆಯಲಿದೆ.
ಹಬ್ಬದ ಶುಭಾಶಯ ವಿನಿಮಯ: ಮನೆ ಮುಂದೆ, ಅಂಗಡಿಗಳ ಮುಂದೆ ತಳಿರು ತೋರಣ, ರಂಗೋಲಿ, ಬಾಳೆ ಕಂದು ಹಾಗೂ ಹೂವುಗಳಿಂದ ಅಲಂಕೃತಗೊಂಡಿರುವ ದೃಶ್ಯಗಳು ಸರ್ವೇಸಾಮಾನ್ಯ ಕಂಡು. ಅಲ್ಲದೇ ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಇನ್ನೂ ಇಂದು ಮೊಬೈಲ್‌ ಅಂಗಡಿ, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯೂವೆಲರ್ಸ್‌ ಸೇರಿದಂತೆ ಇನ್ನಿತರ ಕಡೆ ಲಕ್ಷ್ಮೀ ಪೂಜೆ ನೆರವೇರಿಸಲಿದ್ದಾರೆ.
ಒಟ್ಟಾರೆ ಈ ವರ್ಷ ನೆರೆ ಪ್ರವಾಹದ ಸ್ಥಿತಿಯಲ್ಲೂ ಸಾಂಪ್ರದಾಯಿಕ ಹಬ್ಬವನ್ನು ಸಾರ್ವಜನಿಕರು ಆಚರಣೆ ಮಾಡುತ್ತಿದ್ದು, ಆದರೆ ಈ ವರ್ಷ ದೀಪಾವಳಿ ಹಬ್ಬವು ಮೂರು ದಿನಗಳ ಕಾಲ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ಕೆಲವರು ರವಿವಾರ ಮಾಡಿದರೇ ಮತ್ತೆ ಕೆಲವರು ಇಂದು ಮತ್ತು ನಾಳೆ ಆಚರಣೆ ಮಾಡಲಿದ್ದಾರೆ.

Share

About solaragoppa

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!