Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಕ್ಷಿಣ ಕನ್ನಡ / ಮಂಗಳೂರಿನ ಪ್ರತಿಷ್ಠಿತ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಗೆ ಡಾ. ಅಶ್ವತ್ ನಾರಾಯಣ ಭೇಟಿ.

ಮಂಗಳೂರಿನ ಪ್ರತಿಷ್ಠಿತ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಗೆ ಡಾ. ಅಶ್ವತ್ ನಾರಾಯಣ ಭೇಟಿ.

ಮಂಗಳೂರು : ಐಸ್ ಕ್ರೀಮ್ ಎಂದ ತಕ್ಷಣ ಎಲ್ಲರ ಮುಖದಲ್ಲೂ ಖುಷಿಯೇ ಖುಷಿ…ಅದರಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಮ್ ಎಂದರೆ ಹೇಳಬೇಕೇ , ಬಾಯಲ್ಲಿ ನೀರು ಬರುತ್ತದೆ…ಅದು ಸ್ವಾದಿಷ್ಟ ರುಚಿಕರ ..ಇಂತಹ ಐಸ್ ಕ್ರೀಮ್ ತಿನ್ನಲು ಉಪ ಮುಖ್ಯ ಮಂತ್ರಿ ಡಾ ಅಶ್ವಥ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಗೆ ಬಂದಿದ್ದರು .
ಮಂಗಳೂರಿನ ಪಬ್ಬಾಸ್ ಐಡಿಯಲ್ ಕೆಫೆ ಐಡಿಯಲ್ ಕ್ರೀಮ್ ಪಾರ್ಲರ್ ಈ ಹೆಸರನ್ನು ಕೇಳದವರೇ ಇಲ್ಲ…ಮಂಗಳೂರುಗೆ ಯಾರೇ ಬರಲಿ ಐಡಿಯಲ್ ಐಸ್ ಕ್ರೀಮ್ ರುಚಿ ಸವಿಯದೇ ಹೋಗುವುದೇ ಇಲ್ಲ..ಮಂಗಳೂರಿನಲ್ಲಿದ್ದು ಈಗ ವಿದೇಶದಲ್ಲಿ ಉದ್ಯೋಗದಲ್ಲಿ ಇರುವವರು ಕೂಡಾ ಊರಿಗೆ ಬರುವಾಗ ಐಡಿಯಲ್ ಐಸ್ ಕ್ರೀಮ್ ತಿಂದೆ ತಿನ್ನುತ್ತಾರೆ .ಮಂಗಳೂರು ನ ಐಡಿಯಲ್ ಕ್ರೀಮ್ ಪಾರ್ಲರ್ ಗೆ ವಿಶೇಷ ಅತಿಥಿ ಬಂದಿದ್ದರು .ಅವರು ಮತ್ಯಾರು ಅಲ್ಲ…ರಾಜ್ಯದ ಉಪ ಮುಖ್ಯ ಮಂತ್ರಿ ಡಾ ಅಶ್ವಥ್ ನಾರಾಯಣ್ …ಇವರನ್ನು ಐಡಿಯಲ್ ಸಂಸ್ಥೆಗ ಳ ಪರವಾಗಿ ಪ್ರಭಾಕರ್ ಕಾಮತ್ ಹಾಗೂ ಮುಕುಂದ ಕಾಮತ್ ಸ್ವಾಗತಿಸಿದರು .ಸಂಸ್ಥೆಯ ಮಾಹಿತಿಗಳನ್ನು ನೀಡಿದರು .ಉಪ ಮುಖ್ಯ ಮಂತ್ರಿಗಳು ಕೂಡಾ ಬಹಳತ್ತು ಕುತೂಹಲದಿಂದಲೇ ಇವರ ಮಾತುಗಳನ್ನು ಕೇಳಿದರು .
ಉಪ ಮುಖ್ಯ ಮಂತ್ರಿ ಡಾ ಅಶ್ವಥ ನಾರಾಯಣ ಅವರು ಮಂಗಳೂರಿನ ಕೆ ಎಂ ಸಿ ಕಾಲೇಜಿನ ವಿದ್ಯಾರ್ಥಿ ಆಗಿರುವಾಗ ಆಗಾಗ ಐಡಿಯಲ್ ಕ್ರೀಮ್ ಪಾರ್ಲರ್ ಗೆ ಬರುತಿದ್ದರು .ಗಡ್ ಬಡ್ ತಿನ್ನುತಿದ್ದರು .ತಮ್ಮ ಕಾಲೇಜು ಜೀವನದ ಕ್ಷಣಗಳನ್ನು ಮೆಲುಕು ಹಾಕಿದರು.ಮಂಗಳೂರಿಗೆ ಬರುವುದೇ ತನಗೆಖುಷಿ .ಅದರಲ್ಲು ಐಡಿಯಲ್ ಐಸ್ ಕ್ರೀಮ್ ತಿನ್ನುವುದು ಮತ್ತಷ್ಟ್ಟು ಖುಷಿ ಎಂದು ಹೇಳಿದರು .

Share

About SRINIVAS BIG TV NEWS, MANGALORE

Check Also

ನದಿಗೆ ಹಾರಿ ತಂದೆ – ಮಗ ಆತ್ಮಹತ್ಯೆ.

ಮಂಗಳೂರು : ಮಗುವಿನ ಜೊತೆಗೆ ತಂದೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ನೇತ್ರಾವತಿ …

Leave a Reply

Your email address will not be published. Required fields are marked *

error: Content is protected !!