Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮುಂಬೈ ವಿರುದ್ದ ಕರ್ನಾಟಕಕ್ಕೆ ಆರಂಭಿಕ ಆಘಾತ.

ಮುಂಬೈ ವಿರುದ್ದ ಕರ್ನಾಟಕಕ್ಕೆ ಆರಂಭಿಕ ಆಘಾತ.

 

ಸೂರತ್‌:  ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ​ಯಲ್ಲಿ ಸೆಮಿ​ಫೈ​ನಲ್‌ಗೇರಲು ಕರ್ನಾ​ಟಕ ಕಾತ​ರಿ​ಸು​ತ್ತಿದೆ. ಇದೀಗ ಮುಂಬೈ ತಂಡ ಟಾಸ್ ಗೆದ್ದು ಕರ್ನಾಟಕವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದೆ. ಕರ್ನಾ​ಟಕ ತಂಡ ಸೂಪರ್‌ ಲೀಗ್‌ ಹಂತದ ಅಂತಿಮ ಪಂದ್ಯ​ ಇದಾಗಿದ್ದು, ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.

ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ತಂಡ​ವನ್ನು ಕರ್ನಾ​ಟಕ 20 ಓವ​ರಲ್ಲಿ 6 ವಿಕೆಟ್‌ ನಷ್ಟಕ್ಕೆ 163 ರನ್‌ಗಳಿಗೆ ನಿಯಂತ್ರಿ​ಸಿತು. ಬಳಿಕ ಕೆ.ಎಲ್‌.ರಾ​ಹುಲ್‌ (48 ಎಸೆ​ತ​ಗ​ಳಲ್ಲಿ ಅಜೇಯ 84 ರನ್‌) ಅಬ್ಬ​ರದ ಬ್ಯಾಟಿಂಗ್‌ ನೆರ​ವಿ​ನಿಂದ ಇನ್ನು 2 ಓವರ್‌ ಬಾಕಿ ಇರು​ವಂತೆ ಗೆಲುವು ಸಾಧಿ​ಸಿತು.

ಯುವ ಆರಂಭಿಕ ದೇವ​ದತ್‌ ಪಡಿ​ಕ್ಕಲ್‌ (02) ಅಪರೂಪ ಎಂಬಂತೆ ವೈಫಲ್ಯ ಕಂಡ​ರು. ರೋಹನ್‌ ಕದಂ (23), ಮನೀಶ್‌ ಪಾಂಡೆ (33) ಹಾಗೂ ಕರುಣ್‌ ನಾಯರ್‌ (23), ರಾಹುಲ್‌ಗೆ ಉತ್ತಮ ಬೆಂಬಲ ನೀಡಿ​ದರು. ರಾಹುಲ್‌ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳಿ​ದ್ದವು.

ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ತವ​ಕ

ಪಂಜಾಬ್‌ಗೆ ಮನ​ದೀಪ್‌ ಆಸರೆ: ಟಾಸ್‌ ಗೆದ್ದು ಪಂಜಾಬ್‌ ತಂಡ​ವನ್ನು ಮೊದಲು ಬ್ಯಾಟ್‌ ಮಾಡು​ವಂತೆ ಆಹ್ವಾ​ನಿ​ಸಿದ ಕರ್ನಾ​ಟಕ, ಆರಂಭಿ​ಕ​ರಾದ ಅಭಿ​ಷೇಕ್‌ ಶರ್ಮಾ (05) ಹಾಗೂ ಶುಭ್‌ಮನ್‌ ಗಿಲ್‌ (11) ಅವ​ರನ್ನು ಬೇಗನೆ ಪೆವಿ​ಲಿ​ಯನ್‌ಗಟ್ಟಿತು. ನಾಯಕ ಮನ್‌ದೀಪ್‌ ಸಿಂಗ್‌ 50 ಎಸೆ​ತ​ಗ​ಳಲ್ಲಿ 76 ರನ್‌, ಗುರ್‌ಕೀರತ್‌ ಮಾನ್‌ 32 ಎಸೆ​ತ​ಗ​ಳಲ್ಲಿ 44 ರನ್‌ ಹೋರಾ​ಟದ ನೆರ​ವಿ​ನಿಂದ ಪಂಜಾಬ್‌ ಸ್ಪರ್ಧಾ​ತ್ಮಕ ಮೊತ್ತ ತಲು​ಪಿತು. ಕರ್ನಾ​ಟಕ ಪರ ವೇಗಿ ರೋನಿತ್‌ ಮೋರೆ 4 ವಿಕೆಟ್‌ ಕಬ​ಳಿ​ಸಿ​ದರೆ, ಕೌಶಿಕ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ 1 ವಿಕೆಟ್‌ ಕಿತ್ತರು.

Share

About Admin BIG TV NEWS

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!