Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ

ಮಂಡ್ಯ:- ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇನ್ನೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕು ವಿದ್ಯಾರ್ಥಿಗಳು ಸಹ ಬಹುಮಾನ ಪಡೆದಿದ್ದು, ಈ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಏಕಪಾತ್ರಾಭಿನಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಮಿತ ಬುದ್ದನು ಅಂಗುಲಿಮಾಲನ್ನು ಪರಿವರ್ತಿಸುವ ಸಂದರ್ಭವನ್ನು ತುಂಬಾ ಮನೋಜ್ಞವಾಗಿ ಅಭಿನಯಿಸಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಳೆದಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದ ಸಿ ಎಂ ಸುಶ್ಮಿತಾ ಈ ಬಾರಿಯೂ ಸಹ ಪ್ರಥಮ ಸ್ಥಾನ ಗಳಿಸುವುದರ ಮೂಲಕ ತನ್ನ ಗೆಲುವಿನ ಪ್ರಯಾಣ ಮುಂದುವರಿಸಿದ್ದಾಳೆ. ಇನ್ನೂ ಕಳೆದ ಬಾರಿ ಕಿತ್ತೂರು ಚನ್ನಮ್ಮ , ಥ್ಯಾಕರೆ, ಸಂಗೊಳ್ಳಿ ರಾಯಣ್ಣ, ರಾಯಣ್ಣನ ತಾಯಿ & ಸೇವಕರುಗಳ ಪಾತ್ರವನ್ನು ಅಭಿನಯಿಸಿ ವಿಭಾಗೀಯ ಮಟ್ಟದವರಿಗೆ ಹೋಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿ ಟಿ ಸಹನಾ ರವರು ಈ ಬಾರಿಯೂ ಸಹ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾಳೆ. ಪ್ರಥಮ ಪಿ ಯು ಸಿ ವಿದ್ಯಾರ್ಥಿನಿ ಸಿ ಆರ್ ಕಾವ್ಯಶ್ರೀ ” ದಿನನಿತ್ಯ ಬಳಕೆಗೆ ಜಂಕ್ ಪುಡ್ & ಪಾಸ್ಟ್ ಪುಡ್ ಅವಶ್ಯಕವೇ?” ಎಂಬ ವಿಷಯದ ಕನ್ನಡ ಚರ್ಚೆ ಸ್ವರ್ದೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಡಿ ಗುರುಲಿಂಗೇಗೌಡ, ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share

About Shaikh BIG TV NEWS, Hubballi

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!