Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕೊರೊನಾ ಬಂದ್ರೇ ಭಯ ಬೇಡ! ಕೊರೊನಾ ನಿರ್ಲಕ್ಷ್ಯ ಬೇಡ…
Featured Video Play Icon

ಕೊರೊನಾ ಬಂದ್ರೇ ಭಯ ಬೇಡ! ಕೊರೊನಾ ನಿರ್ಲಕ್ಷ್ಯ ಬೇಡ…

ಹುಬ್ಬಳ್ಳಿ- ಕೊರೋನಾ ಸೋಂಕು ತಗುಲಿದರೆ ಭಯ ಬೇಡ ಧೈರ್ಯದಿಂದ ಇರಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಿ, ಕೊರೊನಾ ಲಕ್ಷಣಗಳು ಕಂಡು ಬಂದರೆ, ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದು, ಕೊರೊನಾದಿಂದ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಸಾರ್ವಜನಿಕರಿಗೆ ಮನವಿ ಮಾಡಿದರು.

ಮಾಧ್ಯಮದ ಮೂಲಕ ತಮ್ಮಗೆ ಆದ ಅನುಭವ ಹಂಚಿಕೊಂಡ ಅವರು, ಕೊರೊನಾ ಬಂದ ತಕ್ಷಣವೇ ಎಲ್ಲರೂ ಭಯ ಬಿದ್ದು ಬದುಕುವುದಲ್ಲಿ ಅನ್ನೋ ತರ ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣ ಭಯ ಪಡದೆ, ಕೊರೊನಾ ಬಗ್ಗೆ ಅಸಡ್ಡೆತನ ತೋರಿಸಿದೇ ಜಾಗೃತಿ ಯಿಂದ ಇರಬೇಕು. ಇನ್ನು ಧಾರವಾಡದಲ್ಲಿ ಆಕ್ಸಿಜನ್ ಕೊರೆತೆ ಇಲ್ಲಾ. ಜಿಲ್ಲಾಡಳಿತ ಎಲ್ಲ ರೀತಿಯ ಸೌಕರ್ಯ ನೀಡುತ್ತಿದೆ. ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ , ಕಡ್ಡಾಯ ಬಳಸಬೇಕು. ಅದರ ಜೊತೆಗೆ ಕಡ್ಡಾಯವಾಗಿ ಎಲ್ಲರೂ ಕೋವಿಡ್ ಲಸಿಕೆ ಪಡೆಯಬೇಕು, ಆನ್ಲೈನ್ ರಿಜಿಸ್ಟರ್ ಮಾಡಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು. ಅಕಸ್ಮಾತ್ ಏನಾದರೂ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡ ಕೊಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ, ನೀಲಕ್ಷ್ಯ ಮಾಡಿದರೇ ಜೀವಕ್ಕೆ ಆಪತ್ತು ಎಂದು ಸಲಹೆ ನೀಡಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!