Home / Breaking News / ಫ್ರೆಂಚ್ ಓಪನ್ ನಿಂದ ದೂರ ಉಳಿದ ಫೆಡರರ್.

ಫ್ರೆಂಚ್ ಓಪನ್ ನಿಂದ ದೂರ ಉಳಿದ ಫೆಡರರ್.

Spread the love

ಪ್ಯಾರಿಸ್: ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್​ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯ ಮೂಲಕ ಫೆಡರರ್ ಇದನ್ನು ತಿಳಿಸಿದ್ದಾರೆ. 20 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ 38 ವರ್ಷದ ಫೆಡರರ್, ಸ್ವಿಜರ್ಲೆಂಡ್​ನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಫ್ರೆಂಚ್ ಓಪನ್​ನೊಂದಿಗೆ ದುಬೈ, ಇಂಡಿಯನ್ ವೆಲ್ಸ್, ಬೊಗೊಟಾ ಹಾಗೂ ಮಿಯಾಮಿ ಟೂರ್ನಿಯಿಂದಲೂ ಹೊರಗುಳಿದಿದ್ದಾರೆ.

ಮೇ 24 ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಫೆಡರರ್ ಫ್ರೆಂಚ್ ಓಪನ್ ಟೂರ್ನಿ ತಪ್ಪಿಸಿಕೊಂಡಂತೆ ಆಗಲಿದೆ.

About Admin BIG TV NEWS

Check Also

ಮತ್ತೇ ಜೈಲ್ ಪಾಲಾದ ಮಾಜಿ ಮಿನಿಸ್ಟರ್

Spread the loveಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂದನಕ್ಕೊಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ …

Leave a Reply

Your email address will not be published. Required fields are marked *

error: Content is protected !!