Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿ / ಜೈನ ಸಮುದಾಯದಿಂದ ಫುಡ್ ಫೆಸ್ಟಿವಲ್ ಆಯೋಜನೆ: ವೆರೈಟಿ ಫುಡ್ ಗಳಿಂದ ಜನರ ಬಾಯಲ್ಲಿ ನೀರು.

ಜೈನ ಸಮುದಾಯದಿಂದ ಫುಡ್ ಫೆಸ್ಟಿವಲ್ ಆಯೋಜನೆ: ವೆರೈಟಿ ಫುಡ್ ಗಳಿಂದ ಜನರ ಬಾಯಲ್ಲಿ ನೀರು.

 

ಹುಬ್ಬಳ್ಳಿ: ಮನೆಯಲ್ಲಿ ನಿತ್ಯ ಬೇಯಿಸಿದ ಆಹಾರ ಸೇವನೆ ಮಾಡಿ ನಾಲಿಗೆಗೆ ರುಚಿ ಇಲ್ಲ ದಂತಾಗುವುದು. ಈ ಹಿನ್ನಲೆಯಲ್ಲಿ ಹೊಸ ರುಚಿ ನೀಡುವ ಸಲುವಾಗಿ ಜೈನ ಸಮಾಜ ಹೊಸ ತರನಾದ ಫುಡ್ ಫೆಸ್ಟಿವಲ್ ಆಯೋಜನೆ ಮಾಡಿತ್ತು. ನೋ ಪಯರ್ ಫುಡ್ ಫೆಸ್ಟಿವಲ್ ಆಯೋಜನೆ ಮಾಡುವ ಮೂಲಕ ಅತ್ತೆ ಸೊಸೆಯರಲ್ಲಿ ಬಾಂಧವ್ಯ ಬೆಸೆಯುವ ಕೆಲಸ ಮಾಡಿದ್ದು, ಮೆಚ್ವುಗೆಗೆ ಪಾತ್ರವಾಗಿದೆ.
ಎಲ್ಲಡೆ ವೈರೈಟಿ ವೈರೈಟಿ ಫುಡ್ ಗಳು. ಎಲ್ಲಾ ಕಡೆ ಗಮ್ಮೆನ್ನುವ ಸುವಾಸೆ, ಬಾಯಲ್ಲಿ ನೀರುರಿಸುವ ಭಕ್ಷಭೋಜನ.‌ ಹೌದು. ಇಂತ ಒಂದು ಅಪರೂಪದ ಫುಡ್ ಫೆಸ್ಟಿವಲ್ ಗೆ ನಗರದ ಮಹಾವೀರ ಭವನ ಸಾಕ್ಷಿಯಾಯಿತು. ಜೈನ ಸಮಾಜ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅತ್ತೆ ಸೊಸೆಯರಲ್ಲಿ ಅನೋನ್ಯತೆಯನ್ನು‌ ಮೂಡಿಸುವ ನಿಟ್ಟಿನಲ್ಲಿ
“ನೋ ಪಯರ್ ಫುಡ್” ಮೇಳವನ್ನು ಆಯೋಜನೆ ಮಾಡಿದ್ದು ಆಹಾರ ಪ್ರೀಯರನ್ನು ಸೆಳೆಯಿತು. ನಿತ್ಯ ಅತ್ತೆ ಸೊಸೆಯಂದಿರುವ ಬೇರೆ ಬೇರೆ ಆಹಾರ ತಯಾರಿಸುತ್ತಾರೆ. ಆದ್ರೆ ಇಲ್ಲಿ ಅತ್ತೆ ಸೊಸೆಯಂದಿರುವ ಯಾವುದೇ ಬೆಂಕಿಯನ್ನು ಬಳಸದೆ ಸಾತ್ವಿಕ ಆಹಾರ ತಯಾರಿಸಿ ಗಮನ‌ಸೆಳೆದರು.
ವಿವಿಧ ನಮೂನೆಯ ಐಸ್‌ಕ್ರೀಂಗಳು, ಮಿಲ್ಕ್, ಚಾಟ್ಸ್, ಕಾಯಿಪಲ್ಲೆಗಳಿಂದ ಮಾಡಿದ ದೇಸಿ ಸಬ್ಜಿ ಜಟಕಾ ಗಳನ್ನು ಸ್ವತಃ ತಾವೇ ತಯಾರಿಸಿದ್ದು ಗಮನ ಸೆಳೆಯಿತು. ಕಾಶ್ಮೀರಿ‌ ಹಾಗೂ ಸೌತ್ ಇಂಡಿಯನ್ ಚಾಟ್ ಗಳನ್ನು ಅತ್ತೆ ಸೊಸೆಯಂದಿರು ಸಿದ್ದಪಡಿಸಿದರು. ಹಳೇ ತಲೆಮಾರು ಹಾಗೂ ಹೊಸ ತಲೆಮಾರಿನ ಫುಡ್ ಗಳನ್ನು ಸಮೀಕರಿಸಿ ತಿಂಡಿಗಳನ್ನು ತಯಾರಿಸಿ ಅತ್ತೆ ಸೊಸೆಯಂದಿರು ಎಂಜಾಯ್ ಮಾಡಿದರು.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವೀಯ ಸಂಬಂಧಗಳು ಕಡಿತವಾಗುತ್ತಿದ್ದು, ಅತ್ತೆ, ಸೊಸೆಯಂದಿರು ದೂರ ದೂರ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜೈನ ಸಮಾಜ ವಿಶಿಷ್ಟ ಫುಡ್ ಫೆಸ್ಟಿವಲ್ ಆಯೋಜನೆ ಮಾಡುವ ಮೂಲಕ ಅತ್ತೆ ಸೊಸೆಯರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು ಜೈನ ಸಮಾಜದ ಮೆಚ್ವುಗೆಗೆ ಪಾತ್ರವಾಗಿದೆ.‌

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!