Hiring Reporter’s For more Information Contact Above Number 876 225 4007 . Program producer
Home / Breaking News / ಮಾಜಿ ಸಿಬಿಐ ನಿರ್ದೇಶಕ ನೇಣಿಗೆ ಶರಣು

ಮಾಜಿ ಸಿಬಿಐ ನಿರ್ದೇಶಕ ನೇಣಿಗೆ ಶರಣು

Spread the love

ನಾಗಾಲ್ಯಾಂಡ್ ನ ಮಾಜಿ ರಾಜ್ಯಪಾಲ ಹಾಗೂ ಮಾಜಿ ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಶಿಮ್ಲಾದ ಬ್ರಾಕ್ ಹಾರ್ಸ್ಟ್ ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಮ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಮೋಹಿತ್ ಚಾವ್ಲಾ ಈ ವಿಷಯವನ್ನು ಖಚಿತಪಡಿಸಿದ್ದು, ಇದು ಆಘಾತಕಾರಿ ಬೆಳವಣಿಗೆ ಎಂಬುದಾಗಿ ತಿಳಿಸಿದ್ದಾರೆ.

2006ರ ಆಗಸ್ಟ್ ನಿಂದ 2008ರ ಜುಲೈವರೆಗೆ ಹಿಮಾಚಲ ಪ್ರದೇಶದ ಡಿಜಿಪಿಯಾಗಿದ್ದ ಕುಮಾರ್, ನಂತರ 2008ರ ಆಗಸ್ಟ್ ನಿಂದ 2010ರ ನವೆಂಬರ್ ವರೆಗೆ ಸಿಬಿಐ ನಿರ್ದೇಶಕರಾಗಿದ್ದರು.

ಗುಜರಾತ್ ನಲ್ಲಿ ಸೊಹರಾಬುದ್ದೀನ್ ಕೊಲೆ ಪ್ರಕರಣದಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜೈಲಿಗಟ್ಟಿದ ಸಿಬಿಐನಲ್ಲಿ ಅಶ್ವನಿ ಕುಮಾರ್ ನಿರ್ದೇಶಕರಾಗಿದ್ದರು.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!