Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕೃಷ್ಣಾ ತೀರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ.‌

ಕೃಷ್ಣಾ ತೀರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ.‌

 

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮಾಜಿ ಸಿ ಎಮ್ ಕುಮಾರಸ್ವಾಮಿ ಸಂಚರಿಸಿ ಸಂತ್ರಸ್ಥರ ಜೊತೆ ತಮ್ಮ ದೀಪಾವಳಿ ಆಚರಿಸಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ,ಕಾಗವಾಡ ತಾಲೂಕಿನ ಜುಗುಳ ಹಾಗೂ ಅಥಣಿ ತಾಲೂಕಿನ ದರೂರ ಮತ್ತು ಸತ್ತಿ ಗ್ರಾಮಗಳಲ್ಲಿ ಸಂಚರಿಸಿದ ಅವರು ಜನರ ಅಳಲು ಆಲಿಸಿ ಸರ್ಕಾರದ ಪರಿಹಾರ ಸಮರ್ಪಕವಾಗಿ ತಲುಪಿದೆಯಾ ಅಂತ ವಿಚಾರಿಸಿದರು.ಈ ವೇಳೆ ಸಂತ್ರಸ್ತರಿಗೆ ಅಕ್ಕಿ ಬೇಳೆ ಸೀರೆ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು…
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿ ಸರ್ಕಾರ ಕೊಡುವ ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಮನೆ ಕಟ್ಟಲು ಸಾಧ್ಯವಾ? ಬೆಳೆ ಪರಿಹಾರ ಸಮರ್ಪಕವಾಗಿದೆಯಾ ಎನ್ನುವ ಮಾಹಿತಿಯನ್ನು ಕಲೆ ಹಾಕಲು ಬಂದಿದ್ದೇನೆ.ಈ ಭಾಗದ ಜನರ ನೋವು ಸಂಕಷ್ಟವನ್ನ ಸರ್ಕಾರದ ಮುಂದೆ ಇಡಲಿದ್ದೇನೆ ಸರ್ಕಾರ ಕೆಲಸ ಮಾಡದೆ ಇದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ.ಚಿಕ್ಕೋಡಿ,ಕಾಗವಾಡ,
ಅಥಣಿ ತಾಲೂಕಿನ ಜನರು ಸಂಕಷ್ಟದಲ್ಲಿ ಇದ್ದಾರೆ ಅದಕ್ಕೆ ಸರ್ಕಾರ ಸ್ಪಂದಿಸಬೇಕು ಚುನಾವಣೆ ಬೇಕಾದರೆ ಮುಂದೂಡಲಿ ಎಂದರು…

Share

About Vijayalakshmi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!