Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಮಂಡ್ಯ / ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ 2000 ಪುಸ್ತಕಗಳ ಉಚಿತ ವಿತರಣೆ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ 2000 ಪುಸ್ತಕಗಳ ಉಚಿತ ವಿತರಣೆ.

ಮಂಡ್ಯ: ಲೋಕೇಶ್ ಬುಕ್ ಹೌಸ್ ವತಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಲಿ ಎಂಬ ಸದುದ್ದೇಶದಿಂದ ಕೃಷ್ಣರಾಜಪೇಟೆಯ ಪಟ್ಟಣದಲ್ಲಿನ ಎಂಜಿನಿಯರಿಂಗ್, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ 2ಸಾವಿರಕ್ಕೂ ಹೆಚ್ಚು ಪುಸ್ತಕಗಳ ಉಚಿತ ವಿತರಣೆ ಮಾಡಲಾಯಿತು.
ನಾರಾಯಣಗೌಡ ಅವರು ಬುಕ್ ಹೌಸ್ ಮಾಲೀಕ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಅವರನ್ನು ಹೂಗುಚ್ಚ ನೀಡಿ ಅಭಿನಂದಿಸಿದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲವಾಗುವಂತೆ ಸಾವಿರಾರು ರೂಪಾಯಿಗಳ ಮೌಲ್ಯದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿಯ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿರುವ ಲೋಕೇಶ್ ಮತ್ತು ಸಹೋದರ ಸೋಮಣ್ಣ
ಅವರ ಸಮಾಜಮುಖಿ ಕಾಳಜಿಯು ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದ ನಾರಾಯಣಗೌಡ ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಪುಸ್ತಕಗಳನ್ನು ಓದುವ, ಪುಸ್ತಕಗಳನ್ನು ಆತ್ಮೀಯ ಗೆಳೆಯರನ್ನಾಗಿ ಮಾಡಿಕೊಳ್ಳುವ ಕಳಕಳಿ ಹಾಗೂ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವ ಶ್ರೇಷ್ಠ ಸಾಧನೆ ಮಾಡಬೇಕು. ಮುಂದಿನ ದಿನಗಳಲ್ಲಿ ಲೋಕೇಶ್ ತಮ್ಮ ತಂದೆತಾಯಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಇನ್ನೂ ಹೆಚ್ಚಿನ ಸಮಾಜಸೇವೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕರ್ತೇನಹಳ್ಳಿ ಸುರೇಶ್, ಅಗ್ರಹಾರಬಾಚಹಳ್ಳಿ ಜಗಧೀಶ್, ಶಿವಕುಮಾರ್,
ನಾರಾಯಣಗೌಡ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್, ಸಂತೋಷ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.
ಉಚಿತ ಎಂಜಿನಿಯರಿಂಗ್ ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಬಂದು ತಮ್ಮ ಶೈಕ್ಷಣಿಕ ವಿಕಾಸಕ್ಕೆ ಬೇಕಾದ ಪುಸ್ತಕಗಳು ಆಯ್ಕೆಮಾಡಿಕೊಂಡರು.

Share

About Vijayalakshmi

Check Also

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ ಮಾಕವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವೇಗೌಡ (55)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ .ಬ್ಯಾಂಕ್,ಟ್ರ್ಯಾಕ್ಟರ್. ಇತರೆ ಕೈ ಸಾಲ ಸೇರಿ 8 …

Leave a Reply

Your email address will not be published. Required fields are marked *

error: Content is protected !!