Breaking News
Hiring Reporter’s For more Information Contact Above Number 876 225 4007 . Program producer
Home / Breaking News / 24 ಕ್ಕೆ ಉಚಿತ ನರರೋಗ ತಪಾಸಣಾ ಶಿಬಿರ.

24 ಕ್ಕೆ ಉಚಿತ ನರರೋಗ ತಪಾಸಣಾ ಶಿಬಿರ.

 

ಹುಬ್ಬಳ್ಳಿ: ನರ ರೋಗ, ಮೆದುಳು ಗಡ್ಡೆ ಮತ್ತು ಬೆನ್ನು ಹುರಿ ಉಚಿತ ತಪಾಸಣೆ ಶಿಬಿರವನ್ನು ನ.24 ರಂದು ಬೆಳಿಗ್ಗೆ 10 ರಿಂದ ಇಲ್ಲಿನ ಹಳೇ ಕೋರ್ಟ್ ಸರ್ಕಲ್ ಹತ್ತಿರದ ಗಿರಿರಾಜ ಅನೇಕ್ಸ್ ಬಿಲ್ಡಿಂಗ್‌ ನ ನರ ವಿಜ್ಞಾನದಲ್ಲಿ ಆಯೋಜಿಸಲಾಗಿದೆ ಎಂದು ನರರೋಗ ತಜ್ಞ ಡಾ.ವಿಜಯ ಮಹಾಂತೇಶ ಪೂಜಾರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ತಾಂತ್ರಿಕತೆ ಅಭಿವೃದ್ಧಿ ಹೊಂದುತ್ತಿದ್ದು, ಅದರಂತೆ ನರ ಶಸ್ತ್ರಚಿಕಿತ್ಸೆಯಲ್ಲೂ ಹಲವಾರು ಬದಲಾವಣೆಯಾಗಿವೆ. ಇದರಿಂದಾಗಿ ನರರೋಗ ವಿಭಾಗ ಮೆದುಳು, ಬೆನ್ನುಹುರಿ, ನರ ಮಾಂಸ ಸಂಬಂಧಿಸಿದ ರೋಗ ಚಿಕಿತ್ಸೆ ಕೊಡಬಹುದಾಗಿದೆ. ಆಪರೇಷನ್ ಕೂಡಾ ಮಾಡುವ ಮೂಲಕ ರೋಗದಿಂದ ಗುಣಪಡಿಸಬಹುದು ಎಂದರು.
ಇನ್ನೂ ಅಂದು ನಡೆಯುವ ಶಿಬಿರದಲ್ಲಿ ತಲೆ, ಬೆನ್ನು, ಕುತ್ತಿಗೆ, ನರಗಳ ದೌರ್ಬಲ್ಯ ,ಕಾಲು, ಲಕ್ವಾ ಸ್ಟ್ರೋಕ್, ಪಾರ್ಶ್ವವಾಯು, ಮೆದುಳಿನ ರಕ್ತ ಸ್ರಾವ, ಅಪಸ್ಮಾರ, ಫಿಟ್ಸ್, ಮೆದುಳು ಮತ್ತು ನರಗಳ ಜ್ವರ ಸೇರಿದಂತೆ ನರ ಕಂಪನ ಪರೀಕ್ಷೆಯನ್ನು ಮಾಡಲಾಗುವುದು. ಆಸಕ್ತರು ಶಿಬಿರದಲ್ಲಿ ಪಾಲ್ಗೊಳ್ಳುವಾಗ ಹಳೇಯ ರಿಪೋರ್ಟ್ ಇದ್ದಲ್ಲಿ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!