Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಫ್ರೆಂಚ್ ಓಪನ್: ಫೈನಲ್ ಗೆ ಲಗ್ಗೆ ಇಟ್ಟ ಸಾತ್ವಿಕ್ ಚಿರಾಗ್ ಜೋಡಿ.

ಫ್ರೆಂಚ್ ಓಪನ್: ಫೈನಲ್ ಗೆ ಲಗ್ಗೆ ಇಟ್ಟ ಸಾತ್ವಿಕ್ ಚಿರಾಗ್ ಜೋಡಿ.

ಪ್ಯಾರಿಸ್ : ಫ್ರೆಂಚ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 750 ಸೆಮಿಫೈನಲ್‌ನಲ್ಲಿ ಭಾರತ ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜಪಾನ್ ಜೋಡಿಯ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಜಪಾನಿನ ವಿಶ್ವದ 6 ನೇ ಕ್ರಮಾಂಕದಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ಅವರನ್ನು 21-11, 25-23 ಸೆಟ್‌ಗಳಿಂದ ಭಾರತೀಯ ಜೊಡಿ ಮಣಿಸುವ ಮೂಲಕ ಈ ಸಾಧನೆ ಮಾಡಿದೆ.
ಈ ವರ್ಷ ಆಗಸ್ಟ್ ನಲ್ಲಿ ನಡೆದಿದ್ದ ಥಾಯ್ ಲ್ಯಾಂಡ್ ಓಪನ್‌ನಲ್ಲಿ ಸಹ ಸಾತ್ವಿಕ್ -ಚಿರಾಗ್ ಜೋಡಿ ಮೊದಲ ಸೂಪರ್ 500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಭಾನುವಾರ ನಡೆಯುವ ಫೈನಲ್‌ನಲ್ಲಿ ಅವರು ವಿಶ್ವದ ನಂ .1 ಜೋಡಿ ಮಾರ್ಕಸ್ ಗಿಡಿಯಾನ್ ಮತ್ತು ಕೆವಿನ್ ಸಂಜಯಾ ವಿರುದ್ಧ ಸೆಣಸಲಿದ್ದಾರೆ.

Share

About Vijayalakshmi

Check Also

ನಾಳೆಯಿಂದ ಭಾರತ – ಇಂಗ್ಲೆಂಡ್ ಟೆಸ್ಟ್.

ಬೆಂಗಳೂರು (ಫೆ. 04): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ಫೆಬ್ರವರಿ …

Leave a Reply

Your email address will not be published. Required fields are marked *

error: Content is protected !!