Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಮತ್ತೆ ಒಂದಾಗುವ ಮುನ್ಸೂಚನೆ ನೀಡುತ್ತಿದ್ದಾರೆ ದ್ರಾವಿಡ್ ಹಾಗೂ ಗಂಗೂಲಿ‌.

ಮತ್ತೆ ಒಂದಾಗುವ ಮುನ್ಸೂಚನೆ ನೀಡುತ್ತಿದ್ದಾರೆ ದ್ರಾವಿಡ್ ಹಾಗೂ ಗಂಗೂಲಿ‌.

ಬೆಂಗಳೂರು: ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿ ಎದುರಾಳಿಗಳ ವಿರುದ್ಧ ಮೈದಾನದಲ್ಲಿ ಹೋರಾಡಿದ್ದ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಾದ ಸೌರವ್​ ಗಂಗೂಲಿ ಹಾಗೂ ಗೋಡೆ ಖ್ಯಾತಿಯ ದ್ರಾವಿಡ್​ ಮತ್ತೊಮ್ಮೆ ಒಂದಾಗಿ ಭಾರತ ಕ್ರಿಕೆಟ್​ಗೆ ಕೊಡುಗೆ ಸಲ್ಲಿಸಲು ಸಿದ್ದರಾಗುತ್ತಿದ್ದಾರೆ.ಗಂಗೂಲಿ ವಾರದ ಹಿಂದೆಯಷ್ಟೇ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಜಂಟಲ್​ಮ್ಯಾನ್​ ದ್ರಾವಿಡ್​ ಕೆಲವು ತಿಂಗಳ ಹಿಂದೆಯೇ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆ ಈ ಇಬ್ಬರು ಲೆಜೆಂಡ್​ ಕ್ರಿಕೆಟಿಗರು ಒಂದೆಡೆ ಸೇರಲು ಅಣಿಯಾಗಿದ್ದಾರೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್​ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.ಈಗಾಗಲೆ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿ ಹಲವಾರು ಬದಲಾವಣೆಗಳನ್ನು ತಂದಿರುವ ದ್ರಾವಿಡ್​ ಅಕ್ಟೋಬರ್​ 30 ಬುಧವಾರ ದ್ರಾವಿಡ್​ – ದಾದಾ ಬೆಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ಈ ವೇಳೆ ಎನ್​ಸಿಎನಲ್ಲಿ ಕೆಲವು ಬದಲಾವಣೆ ಬಗ್ಗೆ ನನ್ನ ಅಭಿಪ್ರಾಯಗಳನ್ನು ತಿಳಿಸಲಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ.ಈ ಸಭೆಗೆ ಹೊಸದಾಗಿ ಗಂಗೂಲಿ ಜೊತೆ ಆಯ್ಕೆಯಾಗಿರುವ ಬಿಸಿಸಿಐನ ಇನ್ನಿತರ ಅಧಿಕಾರಿಗಳು ಸಹಾ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಡೂಪಿಂಗ್​ನಲ್ಲಿ ಸಿಲುಕಿ ನಿಷೇಧಕ್ಕೊಳಗಾಗಿರುವ ಪೃಥ್ವಿ ಶಾ ಹಾಗೂ ಗಾಯಕ್ಕೊಳಗಾಗಿರುವ ಬುಮ್ರಾ ಹಾಗೂ ಹಾರ್ದಿಕ್​ ಪಾಂಡ್ಯರ ಸ್ಥಿತಿಗತಿ ಕುರಿತು ಚರ್ಚಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.​

Share

About Vijayalakshmi

Check Also

ನಾಳೆಯಿಂದ ಭಾರತ – ಇಂಗ್ಲೆಂಡ್ ಟೆಸ್ಟ್.

ಬೆಂಗಳೂರು (ಫೆ. 04): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ಫೆಬ್ರವರಿ …

Leave a Reply

Your email address will not be published. Required fields are marked *

error: Content is protected !!