Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಅನಿಲ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ; ಕೆಲಕಾಲ ಆತಂಕಕ್ಕೆ ಕಾರಣ

ಅನಿಲ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ; ಕೆಲಕಾಲ ಆತಂಕಕ್ಕೆ ಕಾರಣ

ಮಂಗಳೂರು:- ಅನಿಲ ಟ್ಯಾಂಕರೊಂದರ ಮೇಲ್ಭಾಗದ ವಾಲ್ ಏಕಾಏಕಿ ಓಪನ್ ಆಗಿ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕ ತಂದ ಘಟನೆ ಉಪ್ಪಿನಂಗಡಿ ಬಳಿಯ ಕರ್ವೇಲ್ ನಲ್ಲಿ ನಡೆದಿದೆ.
ಇನ್ನೂ ಮಂಗಳೂರಿನಿಂದ ಹಾಸನ ಕಡೆ ಹೋಗುವ ಟೋಟಲ್ ಗ್ಯಾಸ್ ಕಂಪನಿಯ ಅನಿಲ ಟ್ಯಾಂಕರ್ ನ ಮೇಲ್ಭಾಗದ ವಾಲ್ ಏಕಾಏಕಿ ತೆರೆದುಕೊಂಡಿತ್ತು. ಈ ಸಂದರ್ಭ ರಭಸದಿಂದ ನೀರು ಚಿಮ್ಮುವ ಶೈಲಿಯಲ್ಲಿ ಗ್ಯಾಸ್ ಮೇಲ್ಭಾಗಕ್ಕೆ ಚಿಮ್ಮಿ, ಬೆರೆತು ಆವಿಯಾಗತೊಡಗಿತ್ತು. ಕೂಡಲೇ ಕರ್ವೇಲ್ ಮಸೀದಿಯಿಂದ ಮೈಕ್ ಅನೌನ್ಸ್ ಮಾಡಿ ಪರಿಸರದಲ್ಲಿ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಲಾಯಿತ್ತಲ್ಲದೇ, ಪರಿಸರದ ಮನೆಯವರನ್ನು ಸ್ಥಳಾಂತರಗೊಳಿಸಲಾಯಿತು. ಇಕ್ಕೆಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಯಿತು.
ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು, ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದವರು ಸ್ಥಳಕ್ಕೆ ಧಾವಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಶ್ರಮದ ಬಳಿಕ ಗ್ಯಾಸ್ ಸೋರಿಕೆಯನ್ನು ತಡೆಗಟ್ಟಿದರು.
ಘಟನೆ ನಡೆದ ಕೂಡಲೇ ಪುತ್ತೂರು ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಅವರು ಇಲ್ಲಿಗೆ ತಲುವಷ್ಟರಲ್ಲಿ ಅನಿಲ ಸೋರಿಕೆ ತಡೆಗಟ್ಟುವ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು.

Share

About solaragoppa

Check Also

ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡನ ಕೊಲೆಯತ್ನ : ಸ್ಥಿತಿ ಗಂಭೀರ

ಮಂಗಳೂರು: ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡನ ಕೊಲೆಯತ್ನ ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೇರಮಜಲು …

Leave a Reply

Your email address will not be published. Required fields are marked *

error: Content is protected !!