Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಸಂಜು ಸ್ಯಾಮ್ಸನ್ ಗೆ ಗೌತಮ್ ಗಂಭೀರ ಕಿವಿಮಾತು.

ಸಂಜು ಸ್ಯಾಮ್ಸನ್ ಗೆ ಗೌತಮ್ ಗಂಭೀರ ಕಿವಿಮಾತು.

 

ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ – 20 ಕ್ರಿಕೆಟ್​ ಸರಣಿಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಯುವ ಬ್ಯಾಟ್ಸಮನ್​​ ಸಂಜು ಸ್ಯಾಮ್ಸನ್​ ಚಾನ್ಸ್ ಪಡೆದುಕೊಂಡಿದ್ದಾರೆ. ವಿಕೆಟ್​ ಕೀಪರ್​ ಬ್ಯಾಟ್ಸಮನ್​ ಆಗಿರುವ ಸಂಜು ಸ್ಯಾಮ್ಸನ್​ ಬಹಳ ದಿನಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ತಂಡದಲ್ಲಿ ಆಡುವ ಚಾನ್ಸ್​ ಪಡೆದುಕೊಂಡಿದ್ದು, ಸಿಕ್ಕಿರುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಹಾಗೂ ಸಂಸದ ಗೌತಮ್ ಗಂಭೀರ್​ ಕಿವಿಮಾತು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್​ಗೆ ಈ ಹಿಂದೆ ಅನೇಕ ಸಲ ಅವಕಾಶ ಸಿಗದಿದ್ದಾಗ ಆಕ್ರೋಶಗೊಂಡಿದ್ದ ಗಂಭೀರ್​, ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಸಹ ಹೊರಹಾಕಿದ್ದರು. ಇದೀಗ ಆಯ್ಕೆ ಸಮಿತಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇವರು ಟ್ವೀಟ್​ ಮಾಡಿ ತಮ್ಮ ಸಂತೋಷ ಹೊರಹಾಕಿದ್ದಾರೆ. ಈ ಹಿಂದೆ ಜಿಂಬಾಬ್ವೆ ವಿರುದ್ಧ 2015ರಲ್ಲಿ ನಡೆದಿದ್ದ ಏಕೈಕ ಟಿ-20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಂಜು ಕೇವಲ 19ರನ್​ಗಳಿಕೆ ಮಾಡಿದ್ದರು. ಈ ಪಂದ್ಯವನ್ನ ಟೀಂ ಇಂಡಿಯಾ 10ರನ್​ಗಳ ಅಂತರದಿಂದ ಸೋತಿತ್ತು.ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಎಂಎಸ್​ ಧೋನಿ ಜಾಗದಲ್ಲಿ ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡಿದ್ದು, ಒಂದು ವೇಳೆ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೆ ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಮುಕ್ತಾಯಗೊಂಡ ವಿಜಯ ಹಜಾರೆ ಟ್ರೋಪಿಯಲ್ಲಿ ಸಂಜು ಗೋವಾ ವಿರುದ್ಧ 212ರನ್​ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಜತೆಗೆ ಕಳೆದ ಐಪಿಎಲ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಆಯ್ಕ ಸಮಿತಿ ಅವರಿಗೆ ಮಣೆ ಹಾಕಿದೆ. ಈ ಹಿಂದೆ ಯುವ ಆಟಗಾರ ಕೇರಳದ ಸಂಜು ಸ್ಯಾಮ್ಸನ್ ಏಕದಿನದಲ್ಲಿ 4ನೇ ಕ್ರಮಾಂಕಕ್ಕೆ ಸೂಕ್ತ ಎನ್ನುವ ಹರ್ಭಜನ್ ಸಿಂಗ್ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದ ಗೌತಿ, ದಕ್ಷಿಣ ಭಾರತದ ಈ ಕ್ರಿಕೆಟಿಗನ ಶೈಲಿ ಅದ್ಭುತವಾಗಿದೆ. ಈತ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂದು ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಹೊಗಳಿ ಟ್ವೀಟ್​ ಮಾಡಿದ್ದರು.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!