Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ / ದೀಪಾವಳಿ ಬಳಿಕ ದೇವಿಗೆ ಜಲ ದಿಗ್ಭಂಧನ.

ದೀಪಾವಳಿ ಬಳಿಕ ದೇವಿಗೆ ಜಲ ದಿಗ್ಭಂಧನ.

 

ಚಿಕ್ಕೋಡಿ: ಕರ್ನಾಟಕದ ಶಕ್ತಿಮಾತೆ ಎಂದೇ ಪ್ರಖ್ಯಾತಿ ಹೊಂದಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಮೂರನೆಯ ಬಾರಿ ಮುಳುಗಡೆ ಆಗಿದೆ..
ಮಳೆರಾಯನ ಅಬ್ಬರದಿಂದಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದ ಅಥಣಿ ತಾಲೂಕಿನ ಇಪ್ಪತ್ತೋಂದು ಗ್ರಾಮಗಳಲ್ಲಿ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವಾಗಲೆ ಮತ್ತೆ ವರುಣ ತನ್ನ ಅಬ್ಬರ ಮುಂದುವರೆಸಿದ್ದು ಸದ್ಯ ಜನರಲ್ಲಿ ಆತಂಕ ಮನೆ ಮಾಡಿದೆ.ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಕಟಾವಿಗೆ ಬಂದ ಮೆಕ್ಕೆಜೋಳ, ಮತ್ತು ದ್ವಿದಳ ಧಾನ್ಯಗಳು ಅಲ್ಲೆ ಮೊಳಕೆ ಒಡೆಯುವ ಸ್ಥಿತಿ ನಿರ್ಮಾಣವಾಗಿದ್ದರೆ ಇತ್ತ ದೇವಾನು ದೇವತೆಗಳಿಗೂ ಜಲಕಂಟಕ ಎದುರಾಗಿ ಭಕ್ತರು ಪರದಾಡುವಂತಾಗಿದೆ…
ಅಥಣಿ ತಾಲೂಕಿನ ಎಲ್ಲಮ್ಮವಾಡಿಯ ರೇಣುಕಾದೇವಿ
ಎಲ್ಲಮ್ಮನ ಪವಾಡಗಳು ಜನ-ಜನಿತವಾಗಿರುವಾಗಲೇ ಕಳೆದ ಎರಡು ತಿಂಗಳ ಅವಧಿಯಲ್ಲಿ ದೇವಸ್ಥಾನ ಮೂರನೆಯ ಬಾರಿ ಮುಳುಗಡೆ ಆಗುತ್ತಿದ್ದು ಮಹಾರಾಷ್ಟ್ರದ ಮೀರಜ್,ಸಾಂಗಲಿ, ಕೊಲ್ಹಾಪುರ, ಕನ್ಹೇರಿ ಸೇರಿದಂತೆ ಹಲವೆಡೆಯಿಂದ ಭಕ್ತಸಾಗರ ಹರಿದು ಬರುತ್ತಿದ್ದು ಭಕ್ತರು ದೇವಿಯ ದರ್ಶನಕ್ಕೆ ಪರದಾಡುವಂತಾಗಿದೆ…
ಇನ್ನು ಮಳೆರಾಯ ಮುನಿಸಿಕೊಂಡ ಪರಿಣಾಮವಾಗಿ ಇಂತಹ ಅನಾಹುತಗಳು ಮತ್ತೆ ಮತ್ತೆ ಘಟಿಸುತ್ತಿದ್ದು ಜನರು ತೀವ್ರ ತೊಂದರೆಗೆ ಈಡಾಗಿರುವಾಗಲೇ ದೀಪಾವಳಿ ಬಳಿಕ ತನಿಯಬೇಕಿದ್ದ ವರುಣ ಮತ್ತೆ ಅಬ್ಬರಿಸುತ್ತಿದ್ದು ಮುಂದೇನು ಕಾದಿದೆಯೋ ಎಂಬ ಆತಂಕದ ಭಾವನೆಯಲ್ಲಿ ಜನರು ಭಯಭೀತರಾಗಿದ್ದಾರೆ.
ಕಳೆದ ಅರವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಿಪಾವಳಿಯ ಬಳಿಕ ಎಲ್ಲಮ್ಮ ದೇವಿಗೆ ಹೀಗೆ ಮೂರನೆಯ ಬಾರಿ ಜಲಧಿಗ್ಭಂದನ ಎದುರಾಗಿದ್ದು ಸದ್ಯ ವಿಶೇಷ ಪೂಜೆಯ ಮೂಲಕ ವರುಣನ ಕೃಪೆಗಾಗಿ ಮೊರೆ ಇಡಲಿದ್ದೇವೆ ಎನ್ನುತ್ತಾರೆ ದೇವಸ್ಥಾನದ ಪೂಜಾರಿಗಳಾದ ಅರ್ಜುನ ಪೂಜಾರಿ.‌
ಒಟ್ಟಾರೆ ಆಗಿ ಹಿಂಗಾರು ಮಳೆಯ ವೇಳೆ ವರುಣ ಕೃಪೆ ತೋರಿ ಬೆಳೆ ಚನ್ನಾಗಿ ಬರುತ್ತೆ ಅಂತ ನಂಬಿದ ರೈತರಿಗೆ ಮತ್ತೆ ಗಾಯದ ಮೆಲೆ ಬರೆ ಎಳೆದಂತೆ ಆಗಿದೆ,ಸದ್ಯ ಮಳೆರಾಯ ಅಟ್ಟಹಾಸ ಮೆರೆಯುತ್ತಿದ್ದು ಇನ್ನೊಂದು ಕಡೆ ರಕ್ಷಣೆಗಾಗಿ ದೇವರ ಮೊರೆ ಹೋಗಬೇಕು ಎಂದುಕೊಂಡ ಭಕ್ತರಲ್ಲೂ ಎಲ್ಲಮ್ಮ ದೇವಿಯ ಜಲದಿಗ್ಭಂದನ ಭಯ ಹುಟ್ಟಿಸುತ್ತಿರುವದಂತೂ ಸುಳ್ಳಲ್ಲ..
ವರದಿ: ಪ್ರಕಾಶ ಬಿಗ್ ಟಿವಿ ನ್ಯೂಸ್. ಚಿಕ್ಕೋಡಿ

Share

About Prakash s kamble BIG TV NEWS, Athani

Check Also

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು …

Leave a Reply

Your email address will not be published. Required fields are marked *

error: Content is protected !!