Hiring Reporter’s For more Information Contact Above Number 876 225 4007 . Program producer
Home / Breaking News / ರೈತರು, ಯುವಕರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್

ರೈತರು, ಯುವಕರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್

Spread the love

ನವದೆಹಲಿ: ಗ್ರಾಮೀಣ ಭಾಗದಲ್ಲಿ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ರೈತರಿಗೆ, ಹಳ್ಳಿಗಾಡಿನ ಜನರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಈ ಕಾರ್ಡ್ ಆಧಾರ್ ಕಾರ್ಡ್ ತರಹ ಇರುತ್ತದೆ. ಡಿಜಿಟಲ್ ಭಾರತದ ಭಾಗವಾಗಿ ರೂಪಿಸಲಾದ ಈ ಸ್ವಾಮಿತ್ವ ಕಾರ್ಡ್‌ನಲ್ಲಿಯೇ ತಮ್ಮ ಎಲ್ಲಾ ಆಸ್ತಿಗಳ ದಾಖಲೆಗಳು ಸಿಗಲಿವೆ. ಇದರಿಂದ ರೈತರಿಗೆ ತುಂಬಾ ಅನುಕೂಲ ಆಗಲಿದೆ. ಗ್ರಾಮೀಣ ಕುಟುಂಬಗಳು ಸಾಲ ಮತ್ತು ಇತರೆ ಹಣಕಾಸು ಸೌಲಭ್ಯ ಪಡೆಯಲು ಈ ಕಾರ್ಡನ್ನು ಬಳಸಬಹುದಾಗಿದೆ.

ಈ ಯೋಜನೆ ಯುವಕರಿಗೂ ಅನುಕೂಲ ಆಗಲಿದೆ. ತಾವು ಮಾಡುವ ಉದ್ಯೋಗಕ್ಕೆ ಸಾಲ ಪಡೆಯಲು ಸಾಧ್ಯವಾಗೋದಿಲ್ಲ ಅಥವಾ ತಮ್ಮ ಆಸ್ತಿ ಇದ್ದರೂ ಸಾಲ ಪಡೆಯುವುದು ಕಷ್ಟ ಎನ್ನುತ್ತಿದ್ದವರಿಗೆ ಈ ಯೋಜನೆ ನೆರವಾಗುತ್ತದೆ.

ತಮ್ಮ ಆಸ್ತಿಗಳ ಮೇಲೆ ನೇರವಾಗಿ ಹಾಗೂ ಸುಲಭ ಮಾರ್ಗದಿಂದ ಸಾಲ ಪಡೆಯಬಹುದಾಗಿದೆ.

ದೇಶಾದ್ಯಂತ ಮೊದಲ ಹಂತದಲ್ಲಿ 6 ರಾಜ್ಯಗಳ 763 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಉತ್ತರಾಖಂಡದ 50, ಮಧ್ಯಪ್ರದೇಶದ 44, ಕರ್ನಾಟಕದ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ದೇಶದ ಎಲ್ಲಾ ಹಳ್ಳಿಯ ಜನರ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!