Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ದೇಶದ ರೈತರಿಗೆ ಪ್ರಧಾನಿ ಮೋದಿಯವರಿಂದ ಸಿಹಿ‌ ಸುದ್ದಿ.

ದೇಶದ ರೈತರಿಗೆ ಪ್ರಧಾನಿ ಮೋದಿಯವರಿಂದ ಸಿಹಿ‌ ಸುದ್ದಿ.

ನವದೆಹಲಿ : ವಿಶ್ವದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ 16 ದೇಶಗಳ ನಡುವಿನ ಮೆಗಾ ಏಷ್ಯಾದ ವ್ಯಾಪಾರ ಒಪ್ಪಂದವಾದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ( ಆರ್‌ ಸಿಇಪಿ) ಒಪ್ಪಂದದಿಂದ ಭಾರತ ಹಿಂದೆ ಸರಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಬೇಡಿಕೆಗಳ ಬಗ್ಗೆ ದೃಡವಾಗಿ ನಿಂತಿದ್ದಾರೆ ಎನ್ನಲಾಗಿದೆ. ದೇಶದ ಜನತೆ ಹಿತಾಸಕ್ತಿಗಳಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಭಾರತವು ಮತ್ತೆ ಮತ್ತೆ ಈ ಮೂಲಕ ಸ್ಪಷ್ಟಪಡಿಸಿದೆ.
ಭಾರತದ ಕಳವಳಗಳ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ ‘ನಮ್ಮ ರೈತರು, ವ್ಯಾಪಾರಿಗಳು, ವೃತ್ತಿಪರರು ಮತ್ತು ಕೈಗಾರಿಕೆಗಳು, ನಮ್ಮ ನಿರ್ಧಾರಗಳಲ್ಲಿ ಪಾಲು ಹೊಂದಿದ್ದಾವೆ. ಹೀಗಾಗಿ ಭಾರತವನ್ನು ಬೃಹತ್ ಮಾರುಕಟ್ಟೆಯನ್ನಾಗಿ ಮಾಡುವ ಕಾರ್ಮಿಕರು ಮತ್ತು ಗ್ರಾಹಕರು ಮುಖ್ಯ ಅಂತ ಹೇಳಿದ್ದಾರೆ.
ಸುಂಕರಹಿತ ವ್ಯಾಪಾರಕ್ಕೆ ಅನುವು ಮಾಡಿಕೊಡುವುದರಿಂದ ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ನಮ್ಮ ರಾಜ್ಯ ಸೇರಿದಂರೆ ದೇಶದ ಹಲವು ರೈತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಈ ಒಪ್ಪಂದವನ್ನು ವಿರೋಧ ಮಾಡಿದ್ದವು.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!