Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ / ಕರ್ನಾಟಕ / ಜೆಸಿಬಿಗೆ ಗೂಡ್ಸ್ ರೈಲು ಡಿಕ್ಕಿ : ಐದು ತಾಸು ಸಂಚಾರ ವಿಳಂಬ

ಜೆಸಿಬಿಗೆ ಗೂಡ್ಸ್ ರೈಲು ಡಿಕ್ಕಿ : ಐದು ತಾಸು ಸಂಚಾರ ವಿಳಂಬ

ಹುಬ್ಬಳ್ಳಿ, ನ. 08- ದಾವಣಗೆರೆಯ ಡಿಸಿಎಂ ಲೇಔಟ್ ಬಳಿ ಗುರುವಾರ ಸಂಜೆ ಗೂಡ್ಸ್ ರೈಲು ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಸುಮಾರು ಐದು ತಾಸು ರೈಲುಗಳ ಸಂಚಾರ ವಿಳಂಬವಾಗಿದೆ.‌
ಚಿಕ್ಕಜಾಜೂರು – ಹುಬ್ಬಳ್ಳಿ ನಡುವೆ ಜೋಡು ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದಾವಣಗೆರೆ ಬಳಿ ಸಂಜೆ 5.15 ರ ಸುಮಾರಿಗೆ ಗೂಡ್ಸ್ ರೈಲು ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. 27 ಕಾಂಕ್ರೀಟ್ ಸ್ಲೀಪರ್ ಗಳಿಗೂ ಹಾನಿಯಾಗಿದ್ದರಿಂದ ಬೆಂಗಳೂರು – ಹುಬ್ಬಳ್ಳಿ ಬ್ರಾಡ್ ಗೇಜ್ ಮುಖ್ಯ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಕೆಎಸ್ ಆರ್ ಬೆಂಗಳೂರು – ಉದಯಪುರ ಹಮ್ ಸಫರ್ ಎಕ್ಸ್‌ಪ್ರೆಸ್‌ (19668) ರೈಲನ್ನು ತೋಲಹುನ್ನೆಯಲ್ಲಿ, ಕೆಆರ್ ಎಸ್ ಬೆಂಗಳೂರು – ಹುಬ್ಬಳ್ಳಿ ಇಂಟರ್ ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ (12755) ರೈಲನ್ನು ಮಾಯಕೊಂಡದಲ್ಲಿ, ಯಶವಂತಪುರ – ಹಜರತ್ ನಿಜಾಮುದ್ದಿನ್ ಸಂಪರ್ಕ ಕ್ರಾಂತಿ ಸೂಪರ್ ಪಾಸ್ಟ್ ಎಕ್ಸ್‌ಪ್ರೆಸ್‌ (12629) ರೈಲನ್ನು ಹೊಳಲೈರೆಯಲ್ಲಿ, ಚಿತ್ರದುರ್ಗ – ಹರಿಹರ ಪ್ಯಾಸೆಂಜರ್ (56517) ರೈಲನ್ನು ಚಿಕ್ಕಜಾಜೂರನಲ್ಲಿ, ಹುಬ್ಬಳ್ಳಿ – ಕೆಎಸ್ ಆರ್ ಬೆಂಗಳೂರು ಪ್ಯಾಸೆಂಜರ್ (56912) ರೈಲನ್ನು ಹಾವೇರಿಯನ್ನು ಬಿಕಾನೇರ – ಯಶವಂತಪುರ ಎಕ್ಸ್‌ಪ್ರೆಸ್‌ (16588) ರೈಲನ್ನು ಕರ್ಜಗಿಯಲ್ಲಿ ಹಾಗೂ ಯಶವಂತಪುರ – ಹರಿಹರ ಎಕ್ಸ್‌ಪ್ರೆಸ್‌ (16577) ರೈಲನ್ನು ಕಡೂರಿನಲ್ಲಿ ನಿಯಂತ್ರಿಸಲಾಯಿತು. ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ರೈಲು ಸೇವೆಗಳನ್ನು ಪುನರಾರಂಭಿಸಲು ಅನುಕೂಲವಾಗುವಂತೆ ದುರಸ್ತಿ ಕಾರ್ಯಗಳನ್ನು ಕೈಗೊಂಡರು. ರಾತ್ರಿ 9.35 ರ ಸುಮಾರಿಗೆ ರೈಲುಗಳ ಸಂಚಾರ ಪುನಾರಂಭವಾಯಿತು.‌ ಘಟನೆಯು ಯಾವ ಸಂದರ್ಭದಲ್ಲಿ ಸಂಭವಿಸಿದೆ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಸತೀಶ್ ತಿಳಿಸಿದ್ದಾರೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!