Breaking News
Hiring Reporter’s For more Information Contact Above Number 876 225 4007 . Program producer
Home / District / Bengaluru / 500 ಪಡೆದು ಲಸಿಕೆ ಹಾಕುತ್ತಿದ್ದೆ ಸರ್ಕಾರಿ ವೈದ್ಯ ಬಂಧನ…

500 ಪಡೆದು ಲಸಿಕೆ ಹಾಕುತ್ತಿದ್ದೆ ಸರ್ಕಾರಿ ವೈದ್ಯ ಬಂಧನ…

ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಅಕ್ರಮವಾಗಿ ಹಣ ಪಡೆಯುತ್ತಿದ್ದ ವೈದ್ಯೆ ಸೇರಿದಂತೆ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕೋವಿಡ್ ವ್ಯಾಕ್ಸಿನೇಷನ್‌ ಅಕ್ರಮವಾಗಿ ಮಾರುತ್ತಿದ್ದ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಪುಷ್ಪಿತಾ (25) ಹಾಗೂ ಪ್ರೇಮಾ (34) ಬಂಧಿತ ಆರೋಪಿಗಳು.

ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಿತಾ ಮತ್ತು ಸಹಾಯಕಿ ವ್ಯಾಕ್ಸಿನೇಷನ್‌ ಕದ್ದು ಅನ್ನಪೂರ್ಣೇಶ್ವರಿ ನಗರದ ಪ್ರೇಮಾ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು.
ಪ್ರೇಮಾ ಕರೆಸಿದ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನೇಷನ್‌ ನೀಡಲಾಗುತ್ತಿದ್ದು. ಏಪ್ರಿಲ್ 23ರಿಂದಲೂ ತಲಾ 500 ರೂ ಪಡೆದು ವ್ಯಾಕ್ಸಿನೇಷನ್‌ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಆಧರಿಸಿ ವ್ಯಾಕ್ಸಿನೇಷನ್‌ ಪಡೆಯುವ ನೆಪದಲ್ಲಿ ತೆರಳಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ರೆಡ್ ಹ್ಯಾಂಡಾಗಿ ಆರೋಪಿಗಳನ್ನ ಬಂಧಿಸಲು ಯಶಸ್ವಿಯಾಗಿದ್ದು, ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಇಂಜೆಕ್ಷನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Share

About Admin BIG TV NEWS

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!