Hiring Reporter’s For more Information Contact Above Number 876 225 4007 . Program producer
Home / Breaking News / ಸರಕಾರಿ ಕಾರ್ಯಕ್ರಮ ನೆಡೆಯಬೇಕಾದ ಭವನದಲ್ಲಿ ಅಧಿಕಾರ ದುರಪಯೋಗ

ಸರಕಾರಿ ಕಾರ್ಯಕ್ರಮ ನೆಡೆಯಬೇಕಾದ ಭವನದಲ್ಲಿ ಅಧಿಕಾರ ದುರಪಯೋಗ

Spread the love

.ಕೊಪ್ಪಳ : ಜಿಲ್ಲೆ ಕುಷ್ಟಗಿ ಬಸವ ಭವನದಲ್ಲಿ ವಕೀಲರ ಸಂಘದ ಅಧ್ಯಕ್ಷ ಹಾಗೂ ಬಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ ವಕೀಲರು ಬಸವ ಭವನದಲ್ಲಿ ಕಂಪ್ಯೂಟರ್ ಸೆಂಟರ್ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿದ್ದು ಅಲ್ಲದೇ ತಮ್ಮ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಸರಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಹಾಗೂ ಕಲಾವಿದರ ಗಮನಕ್ಕೆ ತರದೇ ಮತ್ತು ಅನುಮತಿ ಇಲ್ಲದೇ ಖಾಸಗಿ ಕರಣ ಮಾಡಿದ್ದಾರೆ ಎಂದು ಆಗ್ರಹಿಸಿ ಕುಷ್ಟಗಿ ತಾಲೂಕು ಕಲಾವಿದರ ಬಳಗ ಇಲ್ಲಿನ ಉಪತಹಶೀಲ್ದಾರ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರ ಸರಕಾರಿ ಕಾರ್ಯಕ್ರಮ ಮಾತ್ರ ನೆಡೆಯಬೇಕು.
ಯಾರ ಅನುಮತಿ ಇಲ್ಲದೇ ಶಂಕರಗೌಡ ಪಾಟೀಲ ವಕೀಲರು ತಮ್ಮ ಸ್ವಂತಕ್ಕೆ ಮೂರು ನಾಲ್ಕು ಕಂಪ್ಯೂಟರ್ ಗಳನ್ನು ಇಡಿಸಿ ವ್ಯಾಪಾರ-ವಹಿವಾಟು ಗಳನ್ನು ನಡೆಸಲು ಅನುಮತಿ ಕೊಟ್ಟಿದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮ ನಡೆಸಲು ಅನಾನುಕೂಲವಾಗುತ್ತಿದೆ.

ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ನೆಡೆಯುತ್ತಿರುವ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಿ ಮತ್ತು ವ್ಯಾಪರ ಚಟುವಟಿಕೆಯನ್ನು ಬಿಡಿಸಿ ಕೂಡಲೇ ತಮ್ಮ ತಹಶೀಲ್ದಾರರ ಆಸ್ತಿತ್ವಕ್ಕೆ ತೆಗೆದುಕೊಳ್ಳಬೇಕು.

ಇನ್ನು ಮುಂದೆ ಈ ಬಸವ ಭವನದಲ್ಲಿ ಯಾರೇ ಕಾರ್ಯಕ್ರಮ ನೆಡೆಸಲು ನಿಗದಿತ ಶುಲ್ಕವನ್ನು ಮಾಡಿ ಬಾಡಿಗೆ ರೂಪದಲ್ಲಿ ನೀಡಿ ಭವನವನ್ನು ಸ್ವಚ್ಚತೆಗಾಗಿ ಇಲಾಖೆಯಿಂದ ಒಬ್ಬರನ್ನು ನೇಮಿಸಿ ಎಂದು ಆಗ್ರಹಿಸಿದರು.

ಒಂದು ವೇಳೆ ಈ ಬಸವ ಭವನದಲ್ಲಿ ಖಾಸಗಿಯಾಗಿ ನೆಡೆಯುತ್ತೀರು ವ್ಯಾಪರ ಚಟುವಟಿಗೆಗಳನ್ನು ನಿಲ್ಲಸದೇ ಹೋದರೆ ಬಸವೇಶ್ವರ ಸರ್ಕಲ್ ಬಂದ್ ಮಾಡಿ ತಾಲೂಕಿನ ಎಲ್ಲಾ ಕಲಾವಿದರು ಸೇರಿ ಉಗ್ರವಾದ ಪ್ರತಿಭಟನೆ ಮಾಡಲಾಗುವದು ಎಂದು ಹೆಚ್ಚರಿಸಿದರು.

ಈ ಸಂದರ್ಭದಲ್ಲಿ ರವೇಂದ್ರ ಬಾಕಳೆ, ವಿರೇಶ ಬಂಗಾರ ಶಟ್ಟರ್, ಬಸನಗೌಡ ಗೌಡ್ರ, ಎಚ್.ವಾಯ್ ಈಟಿಯವರ್, ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಚನ್ನಪ್ಪ ಭಾವಿಮನಿ, ಶುಖಮುನಿ ಗಡಗಿ, ಶರಣಪ್ಪ ಬನ್ನಿಗೋಳ, ಸಿದ್ದಪ್ಪ ಕಲಾಲಬಂಡಿ, ಶರಣಪ್ಪ ಲೈನದ್, ಎಸ್.ಎಸ್.ಹಿರೇಮಠ, ಲಲಿತಮ್ಮ ಹಿರೇಮಠ ಸೇರಿದಂತೆ ತಾಲೂಕಿನ ಹಲವಾರು ಕಲಾವಿದರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!