ಹುಬ್ಬಳ್ಳಿ:- ಕುಡಿಯುವ ನೀರು ಮೂಲಭೂತ ಸೌಕರ್ಯಗಳಲ್ಲೊಂದು. ಆದರೆ ಆ ನೀರು ಪೊರೈಕೆ ಕೆಲಸವನ್ನು ಸರ್ಕಾರ ಸರಿಯಾಗಿ ಮಾಡುತ್ತಿಲ್ಲ ಅನ್ನೋ ಆರೋಪವಿದೆ.ಇದರ ನಡುವೆಯೇ ರಾಜ್ಯ ಸರ್ಕಾರ ನೀರು ಒದಗಿಸುವ ವ್ಯವಸ್ಥೆಯನ್ನೇ, ಖಾಸಗೀಕರಣದ ಮಾಡಲು ಹೊರಟರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು,ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ…
ಹೌದು….ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಹೊಂದಿರೋ ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ.
ಇದರ ನಡುವೆ ಅವಳಿ ನಗರದಲ್ಲಿನ ಜನರಿಗೆ ನೀರು ಒದಗಿಸುತ್ತಿದ್ದ ಜಲಮಮಂಡಳಿಗಳ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ.
ವಿಕ್ರಮ್ ನಾಯ್ಡು ( ಸ್ಥಳೀಯರು)
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ಈ ಪ್ರಕ್ರಿಯೆ ಖಾಸಗೀಕರಣಗೊಂಡರೆ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಸದ್ಯ ಸರಿಯಾಗಿ ನೀರು ಸಿಗದೇ ಜನರು ಪರದಾಡುವ ಪರಿಸ್ಥಿತಿಯಿದೆ. ಜನರು ದಿನನಿತ್ಯ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ನೀರಿಗಾಗಿ ಕಿತ್ತಾಡುತ್ತಲೇ ಇರುತ್ತಾರೆ. ಅದರಲ್ಲೂ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ, ಮಹಾನಗರ ಪಾಲಿಕೆಗಳಿಗೆ ಅವಕಾಶ ನೀಡಿದೆ. ಆದರೆ ಇದೀಗ ಮಹಾನಗರ ಪಾಲಿಕೆಯಿಂದ ಖಾಸಗೀ ಸಂಸ್ಥೆಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನ ನೀಡಲಾಗುತ್ತಿರೋದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೃತ ಇಜಾರೆ (ಕನ್ನಡ ಪರ ಹೋರಾಟಗಾರ)
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಳಗಾವಿ, ವಿಜಯಪುರ ಹಾಗೂ ಕಲಬುರಗಿ ನಗರಗಳ ನೀರಿನ ಸರಬರಾಜು ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಖಾಸಗೀಕರಣಗೊಳಿಸಲು ಚಿಂತನೆ ನಡೆದಿರುವುದು ನಾಲ್ಕು ಮಹಾನಗರ ಪಾಲಿಕಗಳ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದ್ರೆ, ಜಲಮಂಡಳಿಗಳಲ್ಲಿ ಕೆಲಸ ಮಾಡುವ ಸಾವಿರಕ್ಕೂ ಹೆಚ್ಚು ನೌಕರರು ತಮ್ಮ ನೌಕರಿ ಕಳೆದುಕೊಳ್ಳುವ ಆತಂಕ ಕಳೆದುಕೊಳ್ಳಬಹುದು, ಕಳೆದ 25 ವರ್ಷಗಳಿಂದ ಕಾರ್ಯನಿರ್ವಸುತ್ತ ಬಂದಿರೋ ನೌಕರರು ಅತಂತ್ರ ಸ್ಥಿತಿಗೆ ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೇ ಈ ಪ್ರಕ್ರಿಯೆ ಖಾಸಗೀಕರಣಗೊಂಡರೆ ಖಾಸಗಿ ಸಂಸ್ಥೆಗಳು ಬೇಕಾಬಿಟ್ಟಿ ಕರ ವಿಧಿಸಿ, ಜನರನ್ನು ಲೂಟಿ ಮಾಡುವ ಕೆಲಸಕ್ಕಿಳಿಯುತ್ತಾರೆ. ಅಲ್ಲದೇ ಸಾರ್ವತ್ರಿಕ ಸ್ವತ್ತುಗಳಾದ ನದಿಗಳ ಮೂಲವನ್ನು ಖಾಸಗಿ ಕಂಪನಿಗೆ ನೀಡುವುದರಿಂದ ನೀರು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಕೂಡಲೇ ಸರ್ಕಾರ ಸ್ಥಗಿತಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿಯೊಂದು ಸಾರ್ವಜನಿಕ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿವೆ ಅನ್ನೋ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಅದರಲ್ಲೂ ಮೂಲಭೂತ ಸೌಲಭ್ಯದಲ್ಲಿ ಒಂದಾಗಿರೋ ಕುಡಿಯುವ ನೀರು ಪೂರೈಕೆಯನ್ನು ಸಹ ಖಾಸಗೀಕರಣ ಮಾಡುತ್ತಿರೋ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಒಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳನ್ನ ಬಳಸಿಕೊಂಡು, ಜನರಿಗೆ ಸೌಲಭ್ಯ ನೀಡಬೇಕಾದ ಸರ್ಕಾರ ಖಾಸಗೀಕರಣ ಮಾಡಿ,ಬಡವರಿಗೆ ಅನಾನುಕೂಲ ಮಡಲು ಹೊರಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ…