Breaking News
Hiring Reporter’s For more Information Contact Above Number 876 225 4007 . Program producer
Home / Breaking News / ತಪ್ಪು ಮಾಡಿದ್ರೆ ಲಾಟಿ ಹಸಿವಾದ್ರೇ ಊಟ ಕೊಡ್ತಾರೆ ಈ ಆರಕ್ಷಕರು
Featured Video Play Icon

ತಪ್ಪು ಮಾಡಿದ್ರೆ ಲಾಟಿ ಹಸಿವಾದ್ರೇ ಊಟ ಕೊಡ್ತಾರೆ ಈ ಆರಕ್ಷಕರು

ಶಿರಹಟ್ಟಿ : ಅಬ್ಬಾ.. ಕೊರೊನಾ ವೈರಸ್ ಲಾಕ್ ಡೌನ್ ಘೋಷಣೆ ಆದಾಗಿನಿಂದ ತಮ್ಮ ಕುಟುಂಬವನ್ನು ಮರೆತು ಬಿಸಿಲು ಮಳೆ ಲೆಕ್ಕಿಸದೆ ಕರ್ತವ್ಯದಲ್ಲಿರೋ ಈ ಪೊಲೀಸ್ ಅಧಿಕಾರಿಗಳನ್ನ ಮಾಸ್ಕ್

ಇಲ್ಲಾ ಅಂತಾ ದಂಡಾ ಹಾಕಿದ್ರೂ, ವಾಹನದ ಡಾಕುಮೆಂಟ್ಸ್ ಚೆಕ್ ಮಾಡಿದ್ರೂ, ನನಗೆ ಹೊರಗಡೆ ಓಡಾಡೋಕೆ ಅವಕಾಶ ಕೊಡಲಿಲ್ಲಾ ಎಂದು ದ್ವೇಷ ಮಾಡೋ ನಾವು ಅವರ ಅಸಲಿ ಮುಖ

ಗಮನಿಸುವುದೇ ಇಲ್ಲಾ. ಹೌದು! ಸರ್ಕಾರದ ನಿರ್ದೇಶನಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಪೈಕಿ ಇಲ್ಲೋಬ್ರು ಮಾನವೀಯತೆ ತೋರುವ ಕೆಲಸ ಮಾಡಿ ಸದ್ದಿಲ್ಲದೇ ಸುಮ್ಮನಿದ್ದಾರೆ


ಇವರು ಹೆಸರು ನವೀನ್ ಜಕ್ಕಲಿ ಶಿರಹಟ್ಟಿ ಗ್ರಾಮೀಣ ಪೊಲೀಸ್ ಠಾಣಾ ಪಿ ಎಸ್ ‌ಐ. ಡಿ ಎಸ್ ಪಿ. ಶಿವಾನಂದ ಪವಾಡಶೆಟ್ಟಿ ಇವರ ಆಶಯದಂತೆ


ಪಿ ಎಸ್ ಐ.ನವೀನ್ ಜಕ್ಕಲಿ ಅವರು ತಮ್ಮದೇ ಸ್ವಂತ ಖರ್ಚಿನಲ್ಲಿ ಬಡವ ರಿಗೆ ಅಲೆಮಾರಿ ಕುಟುಂಬದವರಿಗೆ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿ ಪ್ರೀತಿ ಸಂಪಾದಿಸಿದ್ದಾರೆ ನಿವೋಮ್ಮೆ ಈ ಚಿತ್ರಗಳನ್ನು ಗಮನಿಸಿ ಹಸಿದವರಿಗೆ ತನ್ನ ಕರ್ತವ್ಯದ ಜೊತೆ ಈ ಪೊಲೀಸ್

ಅಧಿಕಾರಿ ಅನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ, ಇವರ ಕೆಲಸಕ್ಕೆ ಇಡೀ ಪೊಲೀಸ್ ಠಾಣೆ ಅಧಿಕಾರಿಗಳು ಗೌರವ ತೋರಿದ್ರೇ ಶಿರಹಟ್ಟಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದಾರೆ. ಒಟ್ಟಾರೆ ಈ ಪೊಲೀಸಪ್ಪನಿಗೆ ತಪ್ಪು ಮಾಡಿದ್ರೆ ಲಾಟಿ ಹಸಿವಾದೇ ಊಟ ಕೊಡೋದು ಗೊತ್ತು

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!