Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ರಕ್ತದಾನದ ಮೂಲಕ ಇನ್ನೊಬ್ಬರ ಜೀವನ ರೂಪಿಸಲು ಮುಂದಾಗಲು ಜಿ.ವಿ.ರೆಡ್ಡಿ ಸಲಹೆ.

ರಕ್ತದಾನದ ಮೂಲಕ ಇನ್ನೊಬ್ಬರ ಜೀವನ ರೂಪಿಸಲು ಮುಂದಾಗಲು ಜಿ.ವಿ.ರೆಡ್ಡಿ ಸಲಹೆ.

ಆನೇಕಲ್: ದಾನದಲ್ಲಿ ಶ್ರೇಷ್ಟವಾದದ್ದು ರಕ್ತದಾನ. ಹಾಗಾಗಿ ನಾವು ಇನ್ನೊಬ್ಬರ ಜೀವನದಲ್ಲಿ ಸಹಾಯವನ್ನು ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು
ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ತಿಳಿಸಿದರು.
ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಚಿರಂಜೀವಿ ಸಂಘ ಪ್ರಾರಂಭವಾಗಿ 25 ವರ್ಷ ಪೊರೈಸಿದ ಅಂಗವಾಗಿ ಮತ್ತು ಸೈರಾ ನರಸಿಂಹ ರೆಡ್ಡಿ ಯಶಸ್ವಿ ಹಿನ್ನೆಲೆಯಲ್ಲಿ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಭ್ ಮಂಗಲ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು,
ನಮ್ಮ ಸಂಘದ ಕಾರ್ಯಕ್ರಮ ಸಮಾಜಕ್ಕೆ ತಿಳಿಸಬೇಕು.ನಮ್ಮ ಅಭಿಮಾನ ಕೇವಲ ಸಂಘಕ್ಕೆ ಸೀಮಿತವಾಗದೆ ಇತರರಿಗೆ ಮಾದರಿಯಾಗಬೇಕು. 25ವರ್ಷ ಸೇವೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇನ್ಜು ಹೆಚ್ಚಿನ ಸಮಾಜ ಸೇವೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.
ಅಖಿಲ ಕರ್ನಾಟಕ ಚಿರಂಜೀವಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಸ ಮಾತನಾಡಿ, ಸಿನಿಮಾ ಬಂದಾಗ ಅಭಿಮಾನಿಗಳು ಅವರ ಸ್ವಂತ ಪ್ರೀತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆನೇಕಲ್ ಸಂಘವು 25 ವರ್ಷಗಳ ನಿರಂತರ ಒಗ್ಗಟ್ಟಿನ ಸೇವೆ ಮುಂದುವರೆದಿದೆ. ನಮ್ಮ ಸಹಕಾರವೂ ಸದಾ ಇರುತ್ತದೆ ಎಂದರು.
ಎಲ್ಲಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಗಿಡವೊಂದು ಬೆಳೆದು ಮರವಾದಂತೆ ನಾವು ಬೆಳೆಯಬೇಕು.
ಸಂಘದ ಗೌರವ ಅದ್ಯಕ್ಷ ಮಂಜುನಾಥ್ ರೆಡ್ದಿ -ಚಿರಂಜೀವಿಯವರು ಕನ್ನಡದ ಅಭಿಮಾನಿಯಾಗಿದ್ದಾರೆ. ಸತತವಾಗಿ ರಕ್ತ ದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದ್ದು, ಚಿರಂಜೀವಿ ಹೆಸರಿನ ಸಂಸ್ಥೆ ಇನ್ನಷ್ಟು ಬೆಳೆಯಬೇಕು ಎಂದರು.ಯಾರಿಗೇ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘದವನ್ನು ಬೇಡಿಕೆ ಇಟ್ಟಾಗ ಸಿಗುತ್ತದೆ.ಇನ್ನು ಮುಂದೆ ಯಾರಿಗೇ ಆಗಲಿ ರಕ್ತದ ಬೇಡಿಕೆ ಇದ್ದಾಗ ನಮ್ನ ಸಂಘವನ್ನು ಸಂಪರ್ಕಿಸಿದರೆ ಯಾವುದೇ ಸಮಯದಲ್ಲಿ ಸಿದ್ದರಿರುತ್ತೇವೆ.
ಮುನಿರಾಜು ಆನೇಕಲ್ ತಾಲ್ಲೂಕು ಚಿರಂಜೀವಿ ಸಂಘದ ಅಧ್ಯಕ್ಷ-
ಚಿರಂಜೀವಿ ಸಂಘಕ್ಕೆ ಚಿರಂಜೀವಿ ಅವರಿಂದ ಯಾವುದೇ ಹಣ ನೀಡುವುದಿಲ್ಲ, ನಮ್ಮ ರಾಜ್ಯಾದ್ಯಕ್ಷರು ಕೂಡ ಹಣ ನೀಡುವುದಿಲ್ಲ ನಾವು ಅವರ ಅಭಿಮಾನಿಗಳು ಸೇವೆ ಸಲ್ಲಿಸುತ್ತಿದ್ದೇವೆ. ಆನೇಕಲ್ ತಾಲ್ಲೂಕಿನಲ್ಲಿ ಕಚೇರಿ ತೆರೆದು ಮುಂದಿನ ದಿನಗಳಲ್ಲಿ ಸಮಾಜ ಸೇವೆಗೆ ಮುಂದಾಗಬೇಕು ಎನ್ನುವುದು ಸಮ್ಮ ಆಶಯ ಎಂದರು.
ಕರ್ನಾಟಕ ರಾಜ್ಯಾದ್ಯಕ್ಷ ಬಿ.ಜಿ.ನಾಗೇಂದ್ರ, ರಾಮ್ ಚರಣ್ ಯುವಸೇನೆ ರಾಜ್ಯಾದ್ಯಕ್ಷ ಮಾರ್ಟಿನ್, ಮುರುಗ, ಗೋವಿಂದ ಸ್ವಾಮಿ, ಛಲಪತಿ, ಶ್ರೀನಿವಾಸ್, ಲಕ್ಷ್ಮಿ ನರಸಿಂಹ ಚಿತ್ರಮಂದಿರ ಮಾಲೀಕ ಸೀತಣ್ಣ, ಗೌರವಾದ್ಯಕ್ಷ ಟಿ.ಮಂಜುನಾಥ್ ರೆಡ್ಡಿ, ಪ್ರಶಾಂತ ನಾಯ್ಡು, , ಆರ್.ಜಗದೀಶ್, ಆನೇಕಲ್ ತಾಲ್ಲೂಕು ಉಪಾಧ್ಯಕ್ಷ ಎಮ್.ರಾಮು, ಪ್ರಧಾನ ಕಾರ್ಯದರ್ಶಿ ಎಮ್.ವೆಂಕಟೇಶ, ಕುಮಾರ, ನಾರಾಯಣ, ಮಾದೇಶ, ಗುರುಸ್ವಾಮಿ, ವೇಣುಗೋಪಾಲ ಇದ್ದರು.
ತುರ್ತಾಗಿ ರಕ್ತದ ಬೇಡಿಕೆ ಇದ್ದಾಗ ಸಂಪರ್ಕಿಸಬೇಕಾದ ಸಂಖ್ಯೆ-9663776662.
20ಆನೇ ಚಿತ್ರ 01-ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಅದ್ಯಕ್ಷ ಜಿ.ವಿ.ರೆಡ್ದಿ ಉದ್ಘಾಟಿಸಿದರು.

Share

About Vijayalakshmi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!