Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ನೆರೆ ಸಂತ್ರಸ್ತರಿಗೆ ರೋಟರಿ ಪರಿವಾರದಿಂದ ಸಹಾಯ ಹಸ್ತ

ನೆರೆ ಸಂತ್ರಸ್ತರಿಗೆ ರೋಟರಿ ಪರಿವಾರದಿಂದ ಸಹಾಯ ಹಸ್ತ

ಅಥಣಿ :- ರೋಟರಿ ಪರಿವಾರ ಬೆಂಗಳೂರು ವತಿಯಿಂದ ಅಥಣಿ ನೆರೆ ಪೀಡಿತ ಸಂತ್ರಸ್ತರಿಗೆ ಶೆಲ್ಟರ್ ಕಿಟ್ ವಿತರಣೆ ಕಾರ್ಯಕ್ರಮವನ್ನು ರೋಟರಿ ಇಂಡಿಯಾ ಹ್ಯೂಮನಿಟಿ ಫೌಂಡೇಷನ್ 3190 ನಿಂದ ವಿತರಿಸಲಾಯಿತು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಶೆಟ್ಟರ ಮಠದ ಮರಳು ಸಿದ್ದಸ್ವಾಮಿಗಳ ಸನ್ನಿಧಾನದಲ್ಲಿ ಮುಖ್ಯ ಅತಿಥಿಯಾಗಿ  ಜಿಲ್ಲಾ ಕಾರ್ಯದರ್ಶಿ ಗಜಾನನ ಮಂಗಸೂಳಿ ಹಾಗೂ ರೋಟರಿ ಅಥಣಿ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್ ಅಥಣಿ ಮತ್ತು ಸದಸ್ಯರು ಭಾಗಿಯಾಗಿದ್ದರು

ಈ ವೇಳೆ ಪ್ರಾಸ್ತಾವಿಕ ವಾಗಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಗಜಾನನ ಮಂಗಸೂಳಿ ರೋಟರಿಯಿಂದ ಪ್ರವಾಹ ಸಂತ್ರಸ್ತರಿಗೆ ಕಳೆದ ಹದಿನೈದು ದಿನಗಳ ಹಿಂದೆ ವಿತರಿಸಲಾಗಿತ್ತು ಈಗ ನೂರು ಜನ ಕುಟುಂಬಕ್ಕೆ ನೇರವು ಆಗುವಂತ  ಶೆಲ್ಟರ ಕಿಟ್ಟ ವಿತರಿಸಲಾಯಿತು ವಿದೇಶದಲ್ಲಿರುವಂತ  ಧಾನಿಗಳು ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೆನೆ. ಮುಂಬರುವ ದಿನಗಳಲ್ಲಿ ಅತಿ ಹೆಚ್ಚು ಹಾನಿಗೋಳಗಾದ ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿ ಕೋಡಲಾಗುವದು

ಬೆಂಗಳೂರು ರೋಟರಿ ಪರಿವಾರದ ಸದಸ್ಯರು ವೈಯಕ್ತಿಕ ಧನಸಹಾಯ ಮಾಡಿ ಈ ಕಿಟ್ ಗಳನ್ನು ಕೊಟ್ಟಿದ್ದಾರೆ ಎಂದರು.

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಶ್ರೀಕಾಂತ ಅಥಣಿ  ಮಾತನಾಡಿ ರೋಟರಿ ಕ್ಲಬ್ ಅಥಣಿ ಇವರಿಂದ ನಿರಂತರ ಸಮಾಜಮುಖಿ ಕಾರ್ಯಗಳುನ್ನು ಮಾಡುತ್ತಾ ಬಂದಿದ್ದೆ ಹಳವಾರು ಶಾಲೆಗಳಿಗೆ  ಶೌಚಾಲಯಗಳು ಸೇರಿದಂತೆ ಸಾಕಷ್ಟು ಸಹಾಯ ಹಸ್ತ ಚಾಚುತಾ ಬಂದಿದೆ ಈಗಾ ಪ್ರವಾದ ಸಂತ್ರಸ್ತರಿಗೆ ಸರಕಾರವೆ ಎಲ್ಲವನ್ನು ನೇರವು ನೀಡಲು ಆಗುವದಿಲ್ಲಾ. ಆದರಿಂದ  ಸಂತ್ರಸ್ತರಿಗೆ ಇಪ್ಪತ್ತು ಲಕ್ಷ ರೂಪಾಯಿಗಳಲ್ಲಿ ಕಿಟ್ಟ ವಿತರಿಸಿ ಅವಶ್ಯಕ ಇರುವ ಮೂಲ ವಸ್ತುಗಳನ್ನು ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅರುಣ ಯಲಗುದ್ರಿ.ಶ್ರಿಕಾಂತ ಅಥಣಿ,ಸುರೆಶ್ ಬಳ್ಳೋಳಿ,ಸಚಿನ ದೆಸಾಯಿ,ಆನಂದ ಕುಲಕರ್ಣಿ, ಬಾಹುಬಲಿ ಅಸ್ಕಿ,ಸಂತೊಷ ಬಮ್ಮನ್ನವರ,ಅಮೃತ ಕುಲಕರ್ಣಿ ಮೊಹನ ಕಾಂಬಳೆ   ಶೇಖರ ಕೋಲಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share

About Site Default

Check Also

ರೈತರಲ್ಲಿ ಮನವಿ ಮಾಡಿಕೊಂಡ ಈರಣ್ಣ ಕಾಡಾಡಿ.

ಬೆಳಗಾವಿ : ರೈತರ ಅನುಕೂಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಮಸೂದೆಗಳಲ್ಲಿ ತಪ್ಪಿದ್ರೆ …

Leave a Reply

Your email address will not be published. Required fields are marked *

error: Content is protected !!