Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತೆ : ಬಿ.ಶ್ರೀರಾಮಲು

ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತೆ : ಬಿ.ಶ್ರೀರಾಮಲು

ಚಿತ್ರದುರ್ಗ:- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಅನೇಕ ಶಡ್ಯಂತ್ರಗಳು ನಡೆದಿದ್ದು, ಎಲ್ಲಾ ವಿಚಾರಗಳನ್ನು ಹೈಕಮಾಂಡ್ ಸೂಕ್ಷ್ಮವಾಗಿ ನೋಡುತ್ತಿದೆ. ಕೆಲವೇ ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಿಯೋ ಲೀಕ್ ವಿಚಾರ ರಾಜ್ಯದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ಈ ಆಡಿಯೋ ಲಿಕ್ ಹಿಂದೆ ಯಾರು ಮಾಡಿದ್ದಾರೆಂಬುದು ಹೊರ ಬರಬೇಕಿದೆ. ಅಲ್ಲದೇ ಬಿಜೆಪಿಯಲ್ಲಿ ಬಿ.ಎಸ್.ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮುಂದೆ ಹೋಗುವವರು ಯಾರು ಇಲ್ಲ. ಈ ಹಿನ್ನಲೆಯಲ್ಲಿ ಆಡಿಯೋ, ವಿಡಿಯೋ ಕ್ಲೀಪ್ ಪೇಕ್ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಬಿ.ಎಸ್ ವೈ ಈ ವಿಷಯವಾಗಿ ಒಪ್ಪಿಕೊಂಡಿರುವ ಬಗ್ಗೆ ನಾನು ಮಾತನಾಡಲ್ಲ. ಈಗಾಗಲೇ ಬಿ.ಎಸ್.ವೈ ವಿರುದ್ಧ ಅನೇಜ ಶಡ್ಯಂತ್ರಗಳು ನಡೆದಿವೆ. ಅವತ್ತು ಸಭೆಯಲ್ಲಿ ಯಾರಿದ್ದರು ಎನ್ನುವ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.‌ ಬಿ.ಎಸ್.ವೈ ಮಾತನಾಡಿರುವ ಬಗ್ಗೆ ಯಾವುದೇ ಈವರೆಗೆ ಕ್ಲಾರಿಟಿ ಇಲ್ಲಾ..ಅದು ಬೋಗಸ್ ಆಡಿಯೋ ಕ್ಲಿಪ್. ಈ ಬಗ್ಗೆ ಎಲ್ಲಾ ವಿಚಾರಗಳನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವರೇ ನಿರ್ಧರಿಸುತ್ತಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ನಿರ್ನಾಮ: ದೇಶದ ಜನರು ಯಾರು ಚಿಲ್ಲರೆ ರಾಜಕಾರಣ ಮಾಡುತ್ತಾರೆ ಎಂಬುದು ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗುವುದು.
ನೂರಕ್ಕೆ ನೂರು ಗೆಲುವು ನಮ್ಮದೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಾಕತ್ತು ತೋರಿಸಲಿ. ನಾವು ತಾಕತ್ತು ತೋರಿಸುತ್ತೇವೆ. ಉಪಚುನಾವಣೆ ಕುರುಕ್ಷೇತ್ರ ಯುದ್ಧದಲ್ಲಿ ಆಡಳಿತ ಪಕ್ಷ ನೂರಕ್ಕೆ ನೂರು ಗೆಲುವು ಸಾಧಿಸುತ್ತೆ.‌ ಬಿಜೆಪಿಯನ್ನು ದೂಳಿಪಟ ಮಾಡಲು ಸಿದ್ದರಾಮಯ್ಯ ಅವರ ಕೈಯಲ್ಲಿ ಅಸಾಧ್ಯ. ನಾವು ಕೂಡಾ ಫೀಲ್ಡ್ ನಲ್ಲಿ ಇರುತ್ತೇವೆ. ಅವರು ಹೇಗೆ ಚಾಣಾಕ್ಷ ರಾಜಕಾರಣ ಮಾಡುತ್ತಾರೋ ನಾವು ಪ್ರತಿತಂತ್ರ ರೂಪಿಸಿ ಚಾಣಾಕ್ಷ ರಾಜಕಾರಣ ಮಾಡುತ್ತೇವೆ ಎಂದರು.
ಪಕ್ಷದ ನಿರ್ಧಾರಕ್ಕೆ ಬದ್ದ: ನಾನು ಯಾವುದಕ್ಕೂ ಆಸೆ ಪಟ್ಟ ವ್ಯಕ್ತಿ ನಾನಲ್ಲ. ಜನರು ಡಿಸಿಎಂ ಪಟ್ಟ ನೀಡಬೇಕು ಎಂದು ಬಯಸಬಹುದು. ಆದರೆ ನಾನು ಪಕ್ಷದ ನಿರ್ಧಾರಕ್ಕೆ ಬದ್ದ ಎಂದರು.
ಡಿಕೆಶಿ ಜೈಲಿನಿಂದ ಹೊರಬಂದಿದ್ದು ಇಷ್ಟ ಇಲ್ಲ : ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಅವರು ಜೈಲಿನಲ್ಲೇ ಇರುತ್ತಾರೆ ಎಂದು ಭಾವಿಸಿದ್ದರು. ಹೀಗಾಗಿ ಉಪಕದನಕ್ಕೆ ಅಭ್ಯರ್ಥಿಗಳನ್ನು ಶೀಘ್ರವಾಗಿ ಘೋಷಣೆ ಮಾಡಿದರು. ಆದರೆ ಇದೀಗ ಡಿ.ಕೆ.ಶಿವಕುಮಾರ ಜೈಲಿನಿಂದ ಹೊರಬಂದಿದ್ದು, ಇದು ಸಿದ್ದರಾಮಯ್ಯ ಅವರಿಗೆ ಸಮಾಧಾನವಿಲ್ಲ ಎಂದರು.

Share

About solaragoppa

Check Also

ಸಂಪುಟ ರಚನೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ: ಶ್ರೀರಾಮುಲು.

ಚಿತ್ರದುರ್ಗ: ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ, ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಇದರ ಬಗ್ಗೆ ಚರ್ಚೆ ನಡೆದಿದ್ದು, …

Leave a Reply

Your email address will not be published. Required fields are marked *

error: Content is protected !!