Hiring Reporter’s For more Information Contact Above Number 876 225 4007 . Program producer
Home / Breaking News / ಹಿಂದೂ- ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾದ ಈ ಹಬ್ಬಗಳು

ಹಿಂದೂ- ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾದ ಈ ಹಬ್ಬಗಳು

Spread the love

ಹುಬ್ಬಳ್ಳಿ : ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಗಣೇಶ ಮತ್ತು ಮೊಹರಂ ಹಬ್ಬದ ಪಾಂಜಾ ದೇವರನ್ನು ಒಂದೆ ವೇದಿಕೆಯಲ್ಲಿ ಪ್ರತಿಷ್ಟಾಪನೆ ಮಾಡುವ ಮೂಲಕ ತಾಲ್ಲೂಕಿನ ಬಿಡ್ನಾಳ್ ಗ್ರಾಮದ ಜನತೆ ಸೌಹಾರ್ದತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹೀಗೆ ಒಂದು ಕಡೆ ಗಣಪ ಮತ್ತೊಂದು ಕಡೆ ಮುಸ್ಲಿಂ ಪಾಂಜಾ ದೇವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ನಗರದ ಬಿಡ್ನಾಳ ಗ್ರಾಮದಲ್ಲಿ. ಪ್ರತಿ 33 ವರ್ಷಕ್ಕೊಮ್ಮೆ ಕೂಡಿ ಬರುವಂತಹ ಹಬ್ಬಗಳಾಗಿದ್ದು, ಅಂದಿನಿಂದ ಈ ಎರಡು ಹಬ್ಬಗಳನ್ನು ಕೂಡಿ ಆಚರಣೆ ಮಾಡುತ್ತಾ ಬಂದಿದ್ದಾರೆ ಈ ಗ್ರಾಮಸ್ಥರು. ಇಂದಿಗೆ ಮೂರು ವರ್ಷಗಳಾಗಿದ್ದು ಕೊನೆಯ ಹಬ್ಬವಾಗಿದೆ.ಇನ್ನೂ ಒಂದೇ ವೇದಿಕೆಯಲ್ಲಿ ಗಣೇಶ ಚತುರ್ಥಿ ಮತ್ತು ಮೋಹರಂ ನೋಡಬೇಕೆಂದರೇ ಮತ್ತೆ 33 ವರ್ಷಗಳ ವರೆಗೂ ಕಾಯಬೇಕು ಅಷ್ಟೇ ಅಲ್ಲದೇ ಈ ಗ್ರಾಮದಲ್ಲಿ ಪ್ರತಿಯೊಂದು ಹಬ್ಬ ಹಾಗೂ ‌ಕಾರ್ಯಕ್ರಮಗಳನ್ನು ಜಾತಿ ಬೇದ ಭಾವವಿಲ್ಲದೆ ನಡೆಸಿಕೊಂಡು ಬರುತ್ತಿದ್ದು ಮುಂದಿನ ಪೀಳಿಗೆಗಳು ಇದೇ ರೀತ ಮುಂದುವರಿಸತ್ತಾರೇ ಎಂಬ ನಂಬಿಕೆ ಇದೇ ಎನ್ನತ್ತಾರೆ ಗ್ರಾಮಸ್ಥರು!

ಇನ್ನೂ ಬಿಡ್ನಾಳ ಗ್ರಾಮದಲ್ಲಿ ಗಣೇಶೋತ್ಸವ ಹಬ್ಬವನ್ನು ಕಳೆದ 45 ವರ್ಷಗಳಿಂದ ಆಚರಿಸಿಕೊಂಡು ಬರುವುದು ವಿಶೇಷವಾಗಿದೆ. ಆದ್ದರಿಂದ ಗಜಾನನ ಹಾಗೂ ಮೊಹರಂ ಉತ್ಸವ ಸಮಿತಿ ಎಂದೇ ಸಮಿತಿಗೆ ಹೆಸರಿಡಲಾಗಿದೆ. ಮೊದಲಿಗೆ ಗಣೇಶನನ್ನು ಪ್ರತಿಷ್ಠಾಪಿಸಿ ನಂತರ ಬರುವ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದರು.

ಎರಡು ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಆಚರಣೆ ಮಾಡುತ್ತಿದ್ದು, ಭಕ್ತರು ಬೇದ- ಭಾವ ಮಾಡದೇ ಎರಡು ದೇವರಿಗೆ ನಮಿಸಿ, ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸುವುದು ಇಲ್ಲಿನ ಮಾಮೂಲಿಯಾಗಿದೆ.

ಈ ನಡುವೆ ಇಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ವಿಸರ್ಜನೆಯೂ 9 ನೇ ದಿನಕ್ಕೆ ನಡೆಯಲಿದೆ.ಅದೇ ದಿನ ಮೊಹರಂ ಹಬ್ಬದ ದೇವರು ಕಳುಹಿಸುವ ಕಾರ್ಯಕ್ರಮವೂ ಇದೆ. ಮೊದಲಿಗೆ ಮೊಹರಂ ಹಬ್ಬದ ದೇವರುಗಳನ್ನು ಕಳುಹಿಸಿ ಬಳಿಕ ಒಟ್ಟಾಗಿ ಗಣೇಶನ ವಿಸರ್ಜನೆ ಮಾಡುತ್ತಾರೆ.

ಒಟ್ಟನಲ್ಲಿ ಜಾತಿ ಜಾತಿ ಎಂದು ಕೋಮು ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿರುವವರ ನಡುವೆಯೂ ಹಿಂದು ಮುಸ್ಲಿಮ್ ನಾವೆಲ್ಲರೂ ಒಂದೇ ನಮ್ಮಲ್ಲಿ ಭೇದಭಾವವಿಲ್ಲ ಎಂದು ತೋರಸಿಕೊಟ್ಟಿರುವ ಗ್ರಾಮದ ಜನತೆ ಕಾರ್ಯವು ದೇಶಕ್ಕೆ ಮಾದರಿ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!