Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಮಂಡ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು

ಮಂಡ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು

ಮಂಡ್ಯ:- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಪಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಅದರಂತೆ ಮಂಡ್ಯದಲ್ಲಿ ಸಿಎಂ ಬಿ.ಎಸ್.ವೈ ಕೈಬಲ ಪಡಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಡಿ.5ರಂದು ನಡೆಯಲಿರುವ ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಕೈ ಬಲ ಪಡಿಸುವ ಹಿನ್ನೆಲೆಯಲ್ಲಿ ಮಂಡ್ಯ ಹರಿಹರಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅರವಿಂದ, ಕಾಂಗ್ರೆಸ್ ಯುವ ಮುಖಂಡ ದೊದ್ದನಕಟ್ಟೆ ನಾರಾಯಣ, ವಿಠಲಾಪುರ ದೇವರಾಜು, ಬಸವೇಗೌಡ ತಮ್ಮ ನೂರಾರು ಕಾರ್ಯಕರ್ತರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ನಾರಾಯಣಗೌಡರ ನೇತೃತ್ವದಲ್ಲಿ ಬಿಜೆಪಿ ಸೇರಿದರು. ಈ ಮೂಲಕ‌ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಬಾರಿ ಹಿನ್ನೆಡೆಯಾಗಿದ್ದು, ಬಿಜೆಪಿ ಉಪಕದನದಲ್ಲಿ ಜಯ ಭೇರಿ‌‌ ಗಳಿಸುವುದು ಶತಸಿದ್ದ ಎಂದು ದೇವರಾಜು,‌ನಾರಾಯಣ, ಅರವಿಂದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share

About Shaikh BIG TV NEWS, Hubballi

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!