Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಕೆ. ಶ್ರೀನಿವಾಸ.

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಕೆ. ಶ್ರೀನಿವಾಸ.

ಮಂಡ್ಯ: ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ.
ನನ್ನ ಮನೆಗೆ ನಾನು ಮರಳಿ ಬಂದಿದ್ದೇನೆ. ಬಿಜೆಪಿ ಪಕ್ಷದ ಸಂಘಟನೆಗೆ ನಾನೂ ದುಡಿದಿದ್ದೇನೆ ಎಂದು ಕೆ.ಶ್ರೀನಿವಾಸ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೆ.ಆರ್.ಪೇಟೆಯ ಬಿಜೆಪಿ ಪಕ್ಷದ ಅಧ್ಯಕ್ಷನಾಗಿ 6ವರ್ಷಗಳ ಅವಧಿಗೆ ದುಡಿದು ಸಂಘಟನೆ ಮಾಡಿ, ರಾಜ್ಯ ಕಾರ್ಯಕಾರಣಿ ಸದಸ್ಯನಾಗಿ ಕೆಲಸ ಮಾಡಿದ್ದ ನಾನು ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 25ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೆ ಎಂದರು‌.
ಪಕ್ಷದ ಸಂಘಟನೆಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ್ದ ನಾನು ಮಾಜಿಸ್ಪೀಕರ್ ಕೃಷ್ಣ ಅವರನ್ನು ಬೆಂಬಲಿಸಿ ಪಕ್ಷದಿಂದ ಹೊರಹೋಗಿದ್ದೆ.
ಬದಲಾದ ಸನ್ನಿವೇಶದಲ್ಲಿ ಶಾಸಕ ನಾರಾಯಣಗೌಡರ ನೇತೃತ್ವದಲ್ಲಿ ಜನತಾದಳ ಸೇರಿದ್ದ ನಾನು ಈಗ ಮತ್ತೆ ನಾನು ನನ್ನ ಮನೆಗೆ ಮರಳಿ ಬಂದಿದ್ದೇನೆ ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಕೆ.ಶ್ರೀನಿವಾಸ್ (ವಾಸಣ್ಣ) ಕೆ.ಆರ್.ಪೇಟೆ ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಲ್ಲಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಶತಾಯಗತಾಯ ಕಮಲ ಅರಳಿಸಬೇಕು.
ಬಿಜೆಪಿ ಅಭ್ಯರ್ಥಿ ಕೆ.ಆರ್.ಪೇಟೆಯಿಂದ ಭರ್ಜರಿ ಗೆಲುವುಸಾಧಿಸುವ ಮೂಲಕ ಯಡಿಯೂರಪ್ಪ ಅವರಿಗೆ ತವರಿನ ಕಾಣಿಕೆಯನ್ನು ನೀಡಬೇಕು ಎಂಬ ಛಲದೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.
ಪಕ್ಷವು ನನಗೆ ನೀಡಿರುವ ಅಧಿಕಾರ ಸೇರಿದಂತೆ ಯಾವುದೇ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶ್ರೀನಿವಾಸ್ ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀನಿವಾಸ್ ಅವರೊಂದಿಗೆ ಹಿರಿಕಳಲೆ ಗ್ರಾ.ಪಂ ಅಧ್ಯಕ್ಷ ಸುರೇಶ್, ಪುರಸಭೆ ಸದಸ್ಯರಾದ ಮಹಾದೇವಿನಂಜುಂಡ, ಮಾಜಿಸದಸ್ಯ ವಿನೋದ್, ಕೆ.ಕೆ.ಕೃಷ್ಣ ಸೇರಿದಂತೆ ನೂರಾರು ಯುವಕರು ಪಕ್ಷಕ್ಕೆ ಸೇರ್ಪಡೆಯಾದರು.
ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಪ್ರಧಾನಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷ ವರದರಾಜೇಗೌಡ,
ಜಿಲ್ಲಾ ಉಸ್ತುವಾರಿ ಶ್ರೀವತ್ಸ, ಬೂಕಹಳ್ಳಿ ಹರೀಶ್, ಪ್ರಮೀಳಾ, ಇಂದಿರಾ ಸತೀಶ್ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!