Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಕಾಂಗ್ರೆಸ್ ನಿಂದ ಅಪಪ್ರಚಾರ ಸಾಲದು : ಶೆಟ್ಟರ್

ಕಾಂಗ್ರೆಸ್ ನಿಂದ ಅಪಪ್ರಚಾರ ಸಾಲದು : ಶೆಟ್ಟರ್

ಹುಬ್ಬಳ್ಳಿ,ನ.03- ಬಿಎಸ್ ವೈ ಆಡಿಯೋ ವಿಚಾರದ ಹಿನ್ನಲೆಯಲ್ಲಿ ಯಾರು ರೆಕಾರ್ಡ್ ಮಾಡಿದ್ದು, ರಿಲೀಸ್ ಮಾಡಿದ್ದು ಯಾರು ಅದನ್ನು ಕಾಂಗ್ರೆಸ್ ನವರು ಮೊದಲು ಹೇಳಲಿ ಆಮೇಲೆ ಟೀಕೆ ಮಾಡಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋದ ಬ್ರಹ್ಮ ಯಾರು ಎಂಬುವುದು ಮೊದಲು ಹೊರಗಡೆ ಬರಬೇಕು. ಈ ರೀತಿ ಸುಳ್ಳು ಅಪಪ್ರಚಾರ ಮಾಡೋದು ತಪ್ಪು, ಅಲ್ಲದೇ ಬಿಜೆಪಿ ಸರ್ಕಾರ ಹಾಗೂ ಬಿಎಸ್ ವೈ ಮೇಲೆ ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ನಡೆಯುತ್ತಿವೆ.‌ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಬಗ್ಗೆ ಮಾತಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ ಆಡಿಯೋ ಈ ರೀತಿ ಸುಳ್ಳು ಆಡಿಯೋ, ವಿಡಿಯೋ ವಿಚಾರ ಇಟ್ಟುಕೊಂಡು ಜನರ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಈ ವಿಚಾರವಾಗಿ ಜನ ಸ್ಪಂದನೆ ಮಾಡೋದಿಲ್ಲ. ಅಲ್ಲದೇ ಕಾಂಗ್ರೆಸ್ ಅದೋಗತಿಗೆ ಹೋಗುವುದು ಪಕ್ಕಾ ಎಂದು ಹರಿಹಾಯ್ದಿದ್ದಾರೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!