Hiring Reporter’s For more Information Contact Above Number 876 225 4007 . Program producer
Home / Breaking News / ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ

Spread the love

ಆಧಾರ್ ಕಾರ್ಡ್.. ಮಕ್ಕಳನ್ನ ಶಾಲೆಗೆ ಸೇರಿಸುವುದರಿಂದ ಹಿಡಿದು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಈ ಕಾರ್ಡ್ ಬಳಸಲಾಗುತ್ತೆ. ಆಧಾರ್ ನಮ್ಮ ಗುರುತನ್ನು ಸಾಬೀತು ಪಡಿಸುವ ದಾಖಲೆ. ಹೀಗಿದ್ದಾಗ ಆಧಾರ್ ಕಾರ್ಡ್ ನಿಮ್ಮ ಜತೆಯಲ್ಲಿ ಕೊಂಡೊಯ್ಯುವುದು ತುಂಬಾನೇ ಅಗತ್ಯ ಅಲ್ವಾ. ಆದ್ರೆ, ಇಷ್ಟುದ್ದಾಗ ಆಧಾರ್ ತೆಗೆದುಕೊಂಡೋಕೆ ಕಿರಿಕಿರಿ ಆಗ್ತಿದೆ ಅನ್ನೋರಿಗೆ ಅಂತಾನೇ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊಸದಾಗಿ ಪಿವಿಸಿ ಆಧಾರ್ ಕಾರ್ಡ್ ಪರಿಚಯಿಸಿದೆ.

ಪಿವಿಸಿ ಕಾರ್ಡ್ ಗಳಲ್ಲಿ ಆಧಾರ್ ಕಾರ್ಡ್ ರೀಫ್ರಿಂಟ್ ಅಥ್ವಾ ಮರುಮುದ್ರಣ ಮಾಡುವ ಸೌಲಭ್ಯವನ್ನ ಯುಐಡಿಎಐ ಒದಗಿಸುತ್ತಿದೆ. ಈ ಕಾರ್ಡ್ ನೋಡಲು ಥೇಟ್ ಎಟಿಎಂ ಕಾರ್ಡ್ ನಂತೆಯೇ ಇರಲಿದ್ದು, ನಿಮ್ಮ ವಾಲೆಟ್ ಅಥ್ವಾ ಪರ್ಸ್ ನಲ್ಲಿ ಆರಾಮಾಗಿ ಇಟ್ಟುಕೊಳ್ಳಬಹುದು.

ನೀವು ಆಧಾರ್ ಪಿವಿಸಿ ಕಾರ್ಡ್ ಮುದ್ರಿಸಲು ಬಯಸಿದರೆ, ಇದಕ್ಕಾಗಿ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಪೋರ್ಟಲ್ https://resident.uidai.gov.in/ ಅರ್ಜಿ ಸಲ್ಲಿಸಬಹುದು. ನಂತ್ರ ನಿಮ್ಮ ಮನೆ ಬಾಗಿಲಲ್ಲಿಯೇ ಪಿವಿಸಿ ಕಾರ್ಡ್ ನಿಮಗೆ ದೊರೆಯುತ್ತದೆ.

Pvc ಆಧಾರ್ ಕಾರ್ಡ್ ಗೆ ಅಪ್ಲೈ ಮಾಡುವ ಕ್ರಮ ಈ ಕೆಳಗಿನಂತಿದೆ..!

*ಮೊದಲಿಗೆ ಅಧಿಕೃತ ವೆಬ್ ಸೈಟ್ https://resident.uidai.gov.in/ ಗೆ ಭೇಟಿ ನೀಡಿ.

*ವೆಬ್ ಸೈಟ್ ನ ಹೋಮ್ ಪೇಜ್ ನಲ್ಲಿ ‘ನನ್ನ ಆಧಾರ್’ ವಿಭಾಗದಲ್ಲಿ ‘ಆರ್ಡರ್ ಆಧಾರ್ ಪಿವಿಸಿ ಕಾರ್ಡ್’ .

*ಈಗ ಲಾಗಿನ್ ವಿವರಗಳನ್ನು ಭರ್ತಿ ಮಾಡುವ ಮೂಲಕ ಲಾಗಿನ್ ಆಗಿ.

*ನಂತ್ರ ಕ್ಯಾಪ್ಚಾ ಟೈಪ್ ಮಾಡಿ ಮತ್ತು ಸೆಂಡ್ OTP ಮೇಲೆ .

* ಒಟಿಪಿ ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ‘ಸಬ್ಮಿಟ್’ .

*ಈಗ ನೀವು PVC ಕಾರ್ಡ್ ನ ಮುನ್ನೋಟವನ್ನ ನೋಡುತ್ತೀರಿ.

*ಇದಾದ ನಂತರ, ಮುಂದಿನ ಹಂತದಲ್ಲಿ ಹಣ ಪಾವತಿಯಾಗುತ್ತದೆ. ಹಣ ಪಾವತಿ ಮಾಡಿದ ತಕ್ಷಣ ನಿಮ್ಮ ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಲಾಗುತ್ತದೆ. ನಂತ್ರ ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ PVC ಮಾದರಿಯ ಆಧಾರ್ ಬಂದು ತಲುಪುತ್ತೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!