Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಮಕ್ಕಳ ಪ್ರತಿಭೆ ಒರೆಗೆ ಹಚ್ಚುವ ಪ್ರತಿಭಾ ಕಾರಂಜಿ‌ ಉದ್ಘಾಟನೆ.

ಮಕ್ಕಳ ಪ್ರತಿಭೆ ಒರೆಗೆ ಹಚ್ಚುವ ಪ್ರತಿಭಾ ಕಾರಂಜಿ‌ ಉದ್ಘಾಟನೆ.

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ಆವರಣದಲ್ಲಿ 2019-20 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯತ ಸದಸ್ಯ ನಿಂಗೇಗೌಡ ಶಿಕ್ಷಕರು ಶಿಲೆಯಂತಿರುವ ಮಕ್ಕಳಿಗೆ ತಿದ್ದಿ ತೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಕೆಲಸ ನಿರ್ವಹಿಸುತ್ತಾರೆ
ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರ್ ಮಾತನಾಡಿ ಮಕ್ಕಳು ಕೇವಲ ಓದುವುದರಲ್ಲಿ ಮಾತ್ರವಲ್ಲದೆ ಕ್ರೀಡೆ.ಪ್ರತಿಭೆ ಅನಾವರಣ,ಸಂಗೀತ ಹೀಗೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ ಜಯರಾಮು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಈ ವೇದಿಕೆ ಸಹಕಾರಿ ಎಂದು ತಿಳಿಸಿದರು. ತಾ.ಪ್ರಾ.ಶಾ.ಶಿ.ಸಂಘದ ಅದ್ಯಕ್ಷ ಸಿ.ಕೆ. ಶಿವರಾಮೇಗೌಡ ಮಕ್ಕಳು ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕೆ.ಆರ್.ಪೇಟೆಯ ಕೀರ್ತಿ ಬೆಳಗಿಸುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯ ರಾಮದಾಸ್ ಮಾತನಾಡಿ ತೀರ್ಪುಗಾರರು ಉತ್ತಮ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಸೂಕ್ತ ಬಹುಮಾನ ನೀಡಿ ಅವರನ್ನು ಪ್ರೇರೇಪಿಸಬೇಕು ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆಒಳ್ಳೆಯ ತರಬೇತಿ ನೀಡಿ ಸಜ್ಜುಗೊಳಿಸಿದ್ದರಿಂದ ಇಂಥಹ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅ.ದಾ.ಸ.ನಿ ಹಾಗೂ ರಾಜ್ಯ ಪರಿಷತ್ತಿನ ಸದಸ್ಯ ಹೆಚ್.ಕೆ.ಮಂಜುನಾಥ. ಸಮನ್ವಯಾಧಿಕಾರಿ ಲಿಂಗರಾಜು. ಪಿ.ಜೆ.ಕುಮಾರ್, ಸ.ನೌ.ಸಂಘದ ಕಾರ್ಯದರ್ಶಿ ಎಸ್.ಆರ್. ಆನಂದಕುಮಾರ್, ಪದ್ಮೇಶ್.ಎಸ್.ಕೆ.ರವಿಕುಮಾರ್, ಕ.ಸಾ.ಪ.ಅದ್ಯಕ್ಷ ಪೂರ್ಣಚಂದ್ರ ತೇಜಸ್ವಿ. ಚನ್ನರಾಜು, ಪ್ರೌ.ಶಾ
ಮು.ಶಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ವಿಜಿನಾರಾಯಣ,ಎಸ್.ಕೆ.ಹೇಮಣ್ಣ.ಮೋಹನ ಕುಮಾರಿ.ಎ.ಹೆಚ್.ಯೋಗೇಶ್, ಪ್ರೌಢ.ಶಾ.ಸ.ಶಿ.ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್,
ಶಿಕ್ಷಣ ಸಂಯೋಜಕರಾದ ನೀಲಾಮಣಿ, ಸೋಮಶೇಖರ ಬಿ.ಆರ್.ಪಿ ಗಳಾದ ಅನಂತ್, ಅಶೋಕ್.ಶ್ರೀನಿವಾಸ್ ಸೇರಿದಂತೆ ತಾಲೂಕಿನ ಹಲವು ಶಾಲೆಗಳ ಶಿಕ್ಷಕರು ಮಕ್ಕಳು ಹಾಜರಿದ್ದರು. ಮಕ್ಕಳ ಪ್ರತಿಭೆಗಳು ನೋಡುಗರ ಗಮನ ಸೆಳೆದವು. ವಿದ್ಯಾರ್ಥಿಗಳು ವಿವಿಧ ವೇಷಭೂಷಣ ತೊಟ್ಟು ಸಾರ್ವಜನಿಕರನ್ನು ರಂಜಿಸಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!