Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಏರಿಕೆಯಾದ ಬಾಂಗ್ಲಾ ಕ್ರಿಕೆಟಿಗರ ಸಂಬಳ: ಬಿಸಿಬಿ ಆದೇಶ.

ಏರಿಕೆಯಾದ ಬಾಂಗ್ಲಾ ಕ್ರಿಕೆಟಿಗರ ಸಂಬಳ: ಬಿಸಿಬಿ ಆದೇಶ.

 

ಡಾಕಾ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆಯಿಟ್ಟು ಕಳೆದ ವಾರ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸಿದ್ದ ಪ್ರತಿಭಟನೆಗೆ ಬಿಸಿಬಿ ಸ್ಪಂದಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್​ ವೇತನವನ್ನು ದ್ವಿಗುಣಗೊಳಿಸಿದೆ.ಡೊಮೆಸ್ಟಿಕ್​ ಲೀಗ್​ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಪಂದ್ಯವೊಂದಕ್ಕೆ ಈ ಮೊದಲು 35000 ಟಾಕ(29 ಸಾವಿರ ರೂ) ನೀಡಲಾಗುತ್ತಿತ್ತು. ಪ್ರತಿಭಟನೆಯ ನಂತರ 4 ದಿನಗಳ ಪ್ರಥಮ ದರ್ಜೆ ಪಂದ್ಯಕ್ಕೆ 60,000 ಟಾಕ(50 ಸಾವಿರ) ಕ್ಕೆ ಏರಿಸಿ ಬಿಸಿಬಿ ಆದೇಶ ಹೊರಡಿಸಿದೆ.ಎಲ್ಲಾ ರೀತಿಯ ಕ್ರಿಕೆಟ್​ ನಿಲ್ಲಿಸಿ ಮೂರು ದಿನಗಳ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಸಿಬಿ ಕ್ರಿಕೆಟಿಗರ ಬೇಡಿಕೆಗಳಿಗೆ ಮಣಿದು ಈ ಮಹತ್ತರ ಬದಲಾವಣೆ ತಂದಿದೆ. ಸಂಬಳ ಹೆಚ್ಚಿಸುವುದರ ಜೊತೆಗೆ ಇತರೆ ವೆಚ್ಚಗಳನ್ನೂ ಏರಿಸಲಾಗಿದೆ. ಇನ್ನು ದ್ವಿತೀಯ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರಿಕೆಟಿಗರ ಸಂಬಳ 50,000 ಟಾಕಗಳಿಗೆ ಹೆಚ್ಚಳವಾಗಿದೆ.ಮೂರು ದಿನಗಳ ಪ್ರತಿಭಟನೆ ವೇಳೆ ದೇಶಿ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುವ ಕ್ರಿಕೆಟಿಗರಿಗೆ ವೇತನ ಹೆಚ್ಚಿಸಬೇಕೆಂದು ಶಕಿಬ್​,ರಹೀಮ್​, ಮಹಮ್ಮದುಲ್ಲಾ ಸೇರಿದಂತೆ ಇತರೆ ಕ್ರಿಕೆಟಿಗರು ಪ್ರತಿಭಟನೆ ನಡೆಸಿದ್ದರು. ಅವರು ಪ್ರಥಮ ದರ್ಜೆ ಪಂದ್ಯವೊಂದಕ್ಕೆ 1,00,000(87 ಸಾವಿರ) ಟಾಕಗೆ ಏರಿಸಲು ಬೇಡಿಕೆಯಿಟ್ಟಿದ್ದರು.ಕ್ರಿಕೆಟಿಗರು ಇಟ್ಟಿದ್ದ ಬಹುಪಾಲು ಬೇಡಿಕೆಗಳನ್ನು ಈಡೇರಿಸಲು ಬಿಸಿಬಿ ಒಪ್ಪಿದ್ದು ಭಾರತ ಪ್ರವಾಸ ಕೈಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್​ ಒಪ್ಪಿದೆ.ಭಾರತ-ಬಾಂಗ್ಲಾದೇಶ ನಡುವೆ ನವೆಂಬರ್​ 3 ರಿಂದ ಟಿ20 ಸರಣಿ, ನವೆಂಬರ್ 14 ರಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ.

Share

About Vijayalakshmi

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!