Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಹೆಚ್ಚಿದ ವಾಹನ ದಟ್ಟಣೆ: ಮಾರ್ಗ ಮಧ್ಯದಲ್ಲಿಯೇ ಪರದಾಡಿದ ಅಂಬ್ಯುಲೆನ್ಸ್

ಹೆಚ್ಚಿದ ವಾಹನ ದಟ್ಟಣೆ: ಮಾರ್ಗ ಮಧ್ಯದಲ್ಲಿಯೇ ಪರದಾಡಿದ ಅಂಬ್ಯುಲೆನ್ಸ್

ಹುಬ್ಬಳ್ಳಿ,ಅ.27- ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಟ್ರಾಪಿಕ್ ಸಮಸ್ಯೆ ಮೀತಿಮಿರಿ ಬೆಳೆಯುತ್ತಿದ್ದು, ವಾಹನ ದಟ್ಟಣೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ.ಅಲ್ಲದೇ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೊಪ್ಪಿಕರ ರೋಡಿನಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಅಂಬ್ಯುಲೆನ್ಸ್ ಮಾರ್ಗ ಮಧ್ಯದಲ್ಲಿ ಪರದಾಡಿದ ಸ್ಥಿತಿಯೊಂದು ನಿರ್ಮಾಣವಾಯಿತು.
ಹೌದು, ವಾಣಿಜ್ಯನಗರಿ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿಯೇ ಇಂತಹದೊಂದು ಘಟನೆ ನಡೆದಿದ್ದು, ಎರಡು ಬದಿಯಿಂದ ಬರುವ ವಾಹನಗಳ ಮಧ್ಯೆ ನುಸುಳಿಕೊಂಡು ಹೋಗುವಲ್ಲಿ ಅಂಬ್ಯುಲೆನ್ಸ್ ಪರದಾಡಿದ ಸ್ಥಿತಿ ವಿಡಿಯೋದಲ್ಲಿ ಸೆರೆಯಾಗಿದೆ.
ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವಾಹನಗಳು ಸಂಕಷ್ಟಕ್ಕೆ ಸಿಲುಕುವಂತ ಸ್ಥಿತಿ ನಿರ್ಮಾಣವಾಗಿದೆ.
ಜನತೆ ಬೆಂಗಳೂರಿನ ಟ್ರಾಫಿಕ್ ನೋಡಿ ಹುಬ್ಬಳ್ಳಿ ಟ್ರಾಫಿಕ್ ತುಂಬಾ ಕಡಿಮೆ ಎಂದು ಹೇಳುತ್ತಿದ್ದರೂ ಆದರೇ ಪ್ರಸ್ತುತ ದಿನಮಾನಗಳಲ್ಲಿ ಹುಬ್ಬಳ್ಳಿ ಬೆಂಗಳೂರು ಮಹಾನಗರವನ್ನು ಟ್ರಾಫಿಕನಲ್ಲಿ ಹಿಂದಿಕ್ಕುವ ರೀತಿಯಲ್ಲಿ ಮುನ್ನುಗ್ಗುತ್ತಿದೆ.ಒಟ್ಟಾರೆಯಾಗಿ ಆಸ್ಪತ್ರೆಗೆ ತೆರಳಬೇಕಿದ್ದ ಅಂಬ್ಯುಲೆನ್ಸ್ ಕೆಲಕಾಲ ಪರದಾಡಿದ ಸ್ಥಿತಿ ನಿಜಕ್ಕೂ ಮನಕಲುಕುವಂತಿತ್ತು.

Share

About solaragoppa

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!