Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಭಾರತಕ್ಕೆ ಒಲಿದ 2023 ರ ಪುರುಷರ ವಿಶ್ವಕಪ್ ಹಾಕಿ ಆತಿಥ್ಯ.

ಭಾರತಕ್ಕೆ ಒಲಿದ 2023 ರ ಪುರುಷರ ವಿಶ್ವಕಪ್ ಹಾಕಿ ಆತಿಥ್ಯ.

ಲಾಸನ್ನೆ: ಪುರುಷರ ವಿಶ್ವಕಪ್‌ ಹಾಕಿ ಕೂಟದ ಆತಿಥ್ಯ ಸತತ ಎರಡನೇ ಸಲ ಭಾರತಕ್ಕೆ ಒಲಿದು ಬಂದಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ 2023ರ ಹಾಕಿ ವಿಶ್ವಕಪ್‌ ಆತಿಥ್ಯಕ್ಕೆ ಭಾರತವನ್ನು ಆಯ್ಕೆ ಮಾಡಿದೆ. 2023ರ ಜನವರಿ 13ರಿಂದ 29ರ ತನಕ ಹಾಕಿ ಪಂದ್ಯಗಳು ನಡೆಯಲಿವೆ.
ಇದೇ ವೇಳೆ 2022ರ ವನಿತಾ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ಸ್ಪೇನ್‌ ಮತ್ತು ನೆದರ್‌ಲ್ಯಾಂಡ್ಸ್‌ಗೆ ಜಂಟಿಯಾಗಿ ವಹಿಸುವ ಪ್ರಮುಖ ನಿರ್ಧಾರವನ್ನು ಫೆಡರೇಶನ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಕಿ ಪಂದ್ಯಗಳ ತಾಣಗಳನ್ನು ಆತಿಥ್ಯ ವಹಿಸಿದ ದೇಶಗಳು ನಿರ್ಧರಿಸಲಿವೆ.
ಈ ಮೂಲಕ ಭಾರತ ನಾಲ್ಕು ಸಲ ಪುರುಷರ ಹಾಕಿ ವಿಶ್ವಕಪ್‌ ಕೂಟವನ್ನು ಆಯೋಜಿಸಿದ ಅಪರೂಪದ ಹಿರಿಮೆಗೆ ಪಾತ್ರವಾಗಲಿದೆ. 1982 (ಮುಂಬಯಿ), 2010 (ದಿಲ್ಲಿ) ಮತ್ತು 2018 (ಭುವನೇಶ್ವರ)ರಲ್ಲಿ ಹಿಂದಿನ ವಿಶ್ವಕಪ್‌ಗ್ಳನ್ನು ಆಯೋಜಿಸಲಾಗಿತ್ತು.
2023ಕ್ಕೆ ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವವೂ ಹೌದು. ಹಾಕಿ ಇಂಡಿಯಾ ಈ ಸಂದರ್ಭವನ್ನು 75 ವರ್ಷಗಳಲ್ಲಿ ದೇಶದಲ್ಲಿ ಹಾಕಿ ಬೆಳೆದು ಬಂದ ಪರಿಯನ್ನು ಜಗತ್ತಿಗೆ ತೋರಿಸಿಕೊಡಲು ಬಳಸಿಕೊಳ್ಳಲಿದೆ.
ಭಾರತದ ಜತೆಗೆ ಬೆಲ್ಜಿಯಂ, ಮಲೇಶ್ಯಾ ಹಾಕಿ ಆತಿಥ್ಯಕ್ಕೆ ಬಿಡ್ಡಿಂಗ್‌ ಸಲ್ಲಿಸಿದ್ದವು. ವನಿತಾ ಹಾಕಿ ಆಯೋ ಜನೆಯ ಸ್ಪರ್ಧೆಯಲ್ಲಿ ಜರ್ಮನಿ, ಸ್ಪೇನ್‌, ನೆದರ್‌ಲ್ಯಾಂಡ್ಸ್‌, ಮಲೇಶ್ಯಾ, ನ್ಯೂಜಿಲ್ಯಾಂಡ್‌ ಇದ್ದವು.
2018ರಲ್ಲಿ ನಡೆದ ಪುರುಷರ ವಿಶ್ವಕಪ್‌ ಮಾದರಿಯಲ್ಲೇ 2023ರ ವಿಶ್ವಕಪ್‌ ನಡೆಯಲಿದೆ. ಹಾಕಿ ಆಟದ ಅಭಿವೃದ್ಧಿ ಮತ್ತು ಆದಾಯ ಸೃಷ್ಟಿಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್‌ ಆತಿಥ್ಯ ವಹಿಸುವ ದೇಶಗಳನ್ನು ಆಯ್ಕೆ ಮಾಡಲಾಗಿದೆ ಎಂದು ಫೆಡರೇಶನ್‌ನ ಸಿಇಒ ತಿಯರಿ ವೆಲ್‌ ಹೇಳಿದ್ದಾರೆ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!