Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಅದ್ದೂರಿಯಾಗಿ ನಡೆದ ಶ್ರೀಲಕ್ಷ್ಮೀದೇವಿಯ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಸಮಾರಂಭ.

ಅದ್ದೂರಿಯಾಗಿ ನಡೆದ ಶ್ರೀಲಕ್ಷ್ಮೀದೇವಿಯ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಸಮಾರಂಭ.

ಮಂಡ್ಯ: ಚೌಡೇನಹಳ್ಳಿ ಗ್ರಾಮದಲ್ಲಿ ಮಹಾಕಾಳಿ ಶ್ರೀಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಗೋಪುರದ ಕಳಸಾರೋಹಣ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಅನರ್ಹಶಾಸಕ ಡಾ.ನಾರಾಯಣಗೌಡ, ಮಂಡ್ಯ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿಯನ್ನು ಪಡೆಯಬಹುದು. ಶರಣಶ್ರದ್ಧಾ ಕೇಂದ್ರಗಳಾದ ದೇವಾಲಯಗಳನ್ನು ಉಳಿಸಿ ಕಾಪಾಡಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ಇಂದಿನ ಅಗತ್ಯವಾಗಿದೆ. ದೇವರ ಹೆಸರಿನಲ್ಲಿ ಎಲ್ಲರೂ ಜಾತಿಮತ ಬೇಧಭಾವ ಮರೆತು ಒಂದಾಗಿ ಹಬ್ಬದಲ್ಲಿ ಹಾಗೂ
ಉತ್ಸವದಲ್ಲಿ ಭಾಗವಹಿಸುವುದರಿಂದ ಸೌಹಾರ್ಧತೆ ಹಾಗೂ ಭಾವೈಕ್ಯತೆ ಮೂಡುತ್ತದೆ ಎಂದು ಹೇಳಿದ ನಾರಾಯಣಗೌಡ ಚೌಡೇನಹಳ್ಳಿ ಗ್ರಾಮಸ್ಥರ ಧಾರ್ಮಿಕ ಮನೋಭಾವವನ್ನು ಶ್ಲಾಘಿಸಿದರು.
ಪೂಜಾ ಕಾರ್ಯಕ್ರಮ ಹಾಗೂ ಚಂಡಿಕಾ ಹೋಮದ ನಂತರ ನಡೆದ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ 10ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.
ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷ ಕಿಕ್ಕೇರಿ ಸುರೇಶ್, ಮನ್ ಮುಲ್ ನಿರ್ದೇಶಕ ಕೆ.ಜೆ.ತಮ್ಮಣ್ಣ, ಜಿ.ಪಂ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ವೇದಬ್ರಹ್ಮ ನಾಗಣ್ಣ ಮತ್ತು ಶ್ರೀಧರಶರ್ಮಾ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!