Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನಿಯಾ 2019-20.

ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನಿಯಾ 2019-20.

 

ಧಾರವಾಡ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು ೨೦ನೇ ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನೀಯಾ 2019-20 ಕಾರ್ಯಕ್ರಮವನ್ನು ನ.6 ರಿಂದ 9 ರವರೆಗೆ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಎಸ್.ಬಿ. ವಣಕುದರೆ ತಿಳಿಸಿದರು.
ಧಾರವಾಡದ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 6 ರಂದು ಮದ್ಯಾಹ್ನ 3ಕ್ಕೆ ಎಸ್.ಡಿ.ಎಂ.ಇ. ಸಂಸ್ಥೆ ಅಧ್ಯಕ್ಷ ಡಾ. ಡಿ. ವಿರೇಂದ್ರ ಹೆಗ್ಗಡೆ ಯುವಜನೋತ್ಸವಕ್ಕೆ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಹಾಗೂ ಸಚಿವ ಜಗದೀಶ್ ಶೆಟ್ಟರ್ ಖ್ಯಾತ ಕೊಳಲು ವಾದಕ ಪ್ರವೀಣ ಗೊಡ್ಖಿಂಡಿ ಆಗಮಿಸುವರು ಎಂದರು.
ಇನ್ ಸಿಗ್ನೀಯಾದಲ್ಲಿ ಸಂಗೀತ, ನೃತ್ಯ, ನಟನೆ, ಚಿತ್ರಕಲೆ ಸೇರಿದಂತೆ ವೈವಿದ್ಯಮಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ನೇಹಮಯ ವಾತಾವರಣ ನಿರ್ಮಿಸುವ ಜೊತೆಗೆ ಶಿಸ್ತು ಮತ್ತು ಶಾಂತತೆ ವೃದ್ದಿಸುವ ಆಶಯ ಯುವಜನೋತ್ಸವದ್ದಾಗಿದೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಕಾಲೇಜಿನ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸುವರು. ಆಯಾ ವಿಭಾಗದಲ್ಲಿ ಪರಿಣಿತರನ್ನು ನಿರ್ಣಾಯಕರು ಆಗಮಿಸಿ ತೀರ್ಪು ನೀಡಲಿದ್ದಾರೆ. ಸ್ಪರ್ಧೆಮಟ್ಟ ಬಹಳ ಎತ್ತರದಲ್ಲಿರುತ್ತದೆ. ನವೆಂಬರ್ 9 ರಂದು ಸಮಾರೋಪ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಕೆ ಗೋಪಿನಾಥ, ಪ್ರೊ. ವಾಸುದೇವ ಪರ್ವತಿ, ಡಾ. ಎ.ಜಿ. ಬುಜುರ್ಕಿ ಸೇರಿದಂತೆ ಹಲವರಿದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!