Hiring Reporter’s For more Information Contact Above Number 876 225 4007 . Program producer
Home / Breaking News / ಲ್ಯಾಪ್ ಟಾಪ್ ಖರೀದಿಸಲು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಲ್ಯಾಪ್ ಟಾಪ್ ಖರೀದಿಸಲು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Spread the love

ಬಳ್ಳಾರಿ: 2019-20ನೇ ಸಾಲಿನ ಎಸ್.ಎಫ್.ಸಿ ಅನುದಾನದ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಸಿ.ಸಿ.ಎ ಯೋಜನೆಗಳಡಿ ಕುರೇಕುಪ್ಪ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಪ.ಜಾ/ಪ.ಪಂ ಹಾಗೂ ಇತರ ಹಿಂದುಳಿದ ಜನಾಂಗದ ಎಂ.ಬಿ.ಬಿ.ಎಸ್ ಮತ್ತು ಬಿ.ಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ಖರೀದಿಗಾಗಿ ವೈಯಕ್ತಿಕ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಆಸಕ್ತ ಫಲಾನುಭವಿಗಳು ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಲ್ಲಾ ವರ್ಷದ ಅಂಕಪಟ್ಟಿಗಳು, 2 ಭಾವಚಿತ್ರ, ಪಡಿತರ ಚೀಟಿ, ಆಧಾರ್/ಐಡಿ ಕಾರ್ಡ್, ಪ್ರಸಕ್ತ ವ್ಯಾಸಂಗ ಮಾಡುತ್ತಿರುವ ಪ್ರಮಾಣ ಪತ್ರ ಹಾಗೂ ಸಂಬಂಧ ಪಟ್ಟ ಇಲಾಖೆಯಿಂದ ಪತ್ರದ ದಾಖಲೆಯೊಂದಿಗೆ ಆ.12ರೊಳಗಾಗಿ ಕುರೇಕುಪ್ಪದ ಪುರಸಭೆ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೆಬ್‌ಸೈಟ್ http//eproc.karnataka.gov.in, www.kurekuppatown.mrc.gov.in ಗಮನಿಸಬಹುದು ಎಂದು ತಿಳಿಸಿದ್ದಾರೆ.

Check Also

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Spread the loveಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!