Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಇಶಾಂತ ಶರ್ಮಾ ಮನೆಯಲ್ಲಿ ಅತ್ಯಾಚಾರಿ ಅಸರಾಂ ಫೋಟೋ!

ಇಶಾಂತ ಶರ್ಮಾ ಮನೆಯಲ್ಲಿ ಅತ್ಯಾಚಾರಿ ಅಸರಾಂ ಫೋಟೋ!

 

ನವದೆಹಲಿ: ದೀಪಾವಳಿ ಹಬ್ಬವನ್ನು ಆಚರಿಸಿ ಕುಟುಂಬ ಸಮೇತರಾಗಿ ಅಭಿಮಾನಿಗಳಿಗೆ ಶುಭಕೋರುವ ಬರದಲ್ಲಿ ಇಶಾಂತ್​ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಒಂದು ಫೋಟೋ ಟ್ರೋಲ್​ಗೆ ತುತ್ತಾಗಿದೆ.ದೀಪಾವಳಿ ಹಬ್ಬವನ್ನು ಕುಟುಂಬವರ ಜೊತೆ ಆಚರಿಸಿರುವ ಇಶಾಂತ್ ಶರ್ಮಾ ಕೆಲವು ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಆದರೆ ಈ ಫೋಟೋ ನೋಡಿದ ಕೆಲವು ಅಭಿಮಾನಿಗಳು ಅವರ ಫೋಟೋ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಅಸರಾಂ​ ಬಾಪು ಫೋಟೋ ಕಣ್ಣಿಗೆ ಬಿದ್ದಿದೆ.
2.3 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಇಶಾಂತ್​ ಶರ್ಮಾ ಅಸಾರಾಂ​ ಬಾಪು ಭಕ್ತ ಎಂದು ಅಭಿಮಾನಿಗಳು ಟ್ರೋಲ್​ ಮಾಡಲಾರಂಭಿಸಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ಟ್ವೀಟ್​ ಮಾಡಿದ್ದ ಎಲ್ಲಾ ಫೋಟೋಗಳನ್ನು ಇಶಾಂತ್​ ಡಿಲೀಟ್​ ಮಾಡಿದ್ದಾರೆ.ಜೋಧಪುರ ಸಮೀಪದ ಮನಾಯ್‌ನಲ್ಲಿರುವ ಆಶ್ರಮಕ್ಕೆ 2013ರ ಆಗಸ್ಟ್ 15ರಂದು ಬಾಲಕಿಯೊಬ್ಬಳನ್ನು ಅತ್ಯಾಚಾರ ನಡೆಸಲಾಗಿತ್ತು ಎಂದು 16 ವರ್ಷದ ಬಾಲಕಿ ದೂರು ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಅಸರಾಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇಂತಹ ವ್ಯಕ್ತಿಯ ಫೋಟೋ ಮನೆಯಲ್ಲಿಟ್ಟುಕೊಂಡ ಇಶಾಂತ್​ ಕುಟುಂಬ ಇದೀಗ ಮುಜುಗರಕ್ಕೊಳಗಾಗಿದೆ.

Share

About Vijayalakshmi

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!