Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಉಪಚುನಾವಣೆಯಲ್ಲಿ ಜೆ.ಡಿ.ಎಸ್.ನ ಅವಕಾಶವಾದಿ ರಾಜಕಾರಣ ಅಂತ್ಯವಾಗಲಿದೆ: ಕೆ. ಸೋಮಶೇಖರ್.

ಉಪಚುನಾವಣೆಯಲ್ಲಿ ಜೆ.ಡಿ.ಎಸ್.ನ ಅವಕಾಶವಾದಿ ರಾಜಕಾರಣ ಅಂತ್ಯವಾಗಲಿದೆ: ಕೆ. ಸೋಮಶೇಖರ್.

 

ಮಂಡ್ಯ : ಕೆ.ಆರ್.ಪೇಟೆಯ ಜನತೆ ಅನಿರೀಕ್ಷಿತ ಫಲಿತಾಂಶ ನೀಡಲಿದ್ದು ಕಮಲ ಅರಳುವುದು ನಿಶ್ಚಿತವಾಗಿದೆ ಎಂದು ಮಾಜಿಸಚಿವ ಬಿ.ಸೋಮಶೇಖರ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಅವಕಾಶವಾಧಿ ರಾಜಕಾರಣಕ್ಕೆ ಅಂತ್ಯ ಸಮೀಪಿಸುತ್ತಿದ್ದರೆ, ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಪರವಾದ ಗಾಳಿಯು ಜೋರಾಗಿ ಬೀಸುತ್ತಿದ್ದು
ಉಪ ಚುನಾವಣೆಯ ಫೈನಲ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ರಾಜ್ಯದ ಮಾಜಿಸಚಿವ ದಲಿತ ನಾಯಕ ಬಿ.ಸೋಮಶೇಖರ್ ಹೇಳಿದರು.
ಮಂಡ್ಯ ಕೃಷ್ಣರಾಜಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ದಲಿತ ಬಂಧುಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿ ಪಕ್ಷದ
ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜನಪರ ಹೋರಾಟಗಾರ ಮಾಜಿಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಹರಸಿ ಆಶೀರ್ವದಿಸಿ ವಿಜಯಮಾಲೆ ತೊಡಿಸಬೇಕು ಎಂದು ಮನವಿ ಮಾಡಿದ ಸೋಮಶೇಖರ್ ಹಾಸನ ಜಿಲ್ಲೆಯಲ್ಲಿ ಕಮಲದ ಅಭ್ಯರ್ಥಿಯಾಗಿ ಶಾಸಕ ಪ್ರೀತಂಗೌಡ ಗೆದ್ದಿದ್ದಾರೆ
ಮಂಡ್ಯ ಜಿಲ್ಲೆಯಲ್ಲಿಯೂ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡರು ಗೆದ್ದು ಇತಿಹಾಸವನ್ನು ನಿರ್ಮಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತವರಿನ ಕಾಣಿಕೆಯನ್ನು ನೀಡಲಿದ್ದಾರೆ ಎಂದು ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆ ನಡೆಯುತ್ತಿರುವ 15ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕನಿಷ್ಠ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರೆ ಜೆಡಿಎಸ್ ಶೂನ್ಯ ಸಂಪಾದನೆಗೆ ತೃಪ್ತಿಪಡಬೇಕಿದೆ ಎಂದು ಮಾಜಿಸಚಿವ ಸೋಮಶೇಖರ್ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಗ್ರಹಾರಬಾಚಹಳ್ಳಿ ಆರ್. ಜಗಧೀಶ್, ನಾಯಕ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ನರೇಂದ್ರನಾಯಕ,
ಹಲಗೂರಿನ ನಾಗೇಶ್, ಕೃಷ್ಣೇಗೌಡ, ಚೌಡೇಗೌಡ, ದೊಡ್ಡನಿಂಗನಾಯಕ, ಶಿವಾನಂದ, ಕುಪ್ಪಳ್ಳಿ ಮಹೇಶ್, ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!