Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಆಗಸ್ಟ್ 1 ರಿಂದ ಜಿಮ್, ಸಿನಿಮಾ ಆರಂಭ?

ಆಗಸ್ಟ್ 1 ರಿಂದ ಜಿಮ್, ಸಿನಿಮಾ ಆರಂಭ?

Spread the love

ನವದೆಹಲಿ : ‘ಅನ್ಲಾಕ್ 2.0’ ನ ಕೋವಿಡ್ -19 ನಿರ್ಬಂಧಗಳು ಶುಕ್ರವಾರ (ಜುಲೈ 31) ಕೊನೆಗೊಳ್ಳುತ್ತಿದ್ದು ಈ ನಡುವೆ ಕೇಂದ್ರ ಸರ್ಕಾರ ಈಗ ಅನ್ಲಾಕ್ 3.0 ಗಾಗಿ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ, ಹೊಸ ಮಾರ್ಗಸೂಚಿಗಳು ಆಗಸ್ಟ್ ನಿಂದ ಜಾರಿಗೆ ಬರಲಿದ್ದು, ಆ ವೇಳೆ ಚಿತ್ರಮಂದಿರಗಳು ಮತ್ತು ಜಿಮ್ ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ನಿರ್ಬಂಧಗಳನ್ನು ಹಂತಹಂತವಾಗಿ ಸರಾಗವಾಗುತ್ತಿದ್ದು, ಅನ್‌ಲಾಕ್ 3 ರಲ್ಲಿ ಹಲವು ಸೆಕ್ಟರ್‌ಗಳಲ್ಲಿ ಕೇಂದ್ರ ಸರ್ಕಾರ ಪುನಃ ಕಾರ್ಯರಂಭಕ್ಕೆ ಅನುಮತಿ ನೀಡಬಹುದು ಎನ್ನಲಾಗುತ್ತಿದೆ. ಆಗಸ್ಟ್ 1 ರಿಂದ ಸಿನೆಮಾ ಹಾಲ್‌ಗಳನ್ನು ಪುನಃ ತೆರೆಯ ಬಹುದು ಎನ್ನಲಾಗುತ್ತಿದ್ದು, ಆದಾಗ್ಯೂ, ಅನ್ಲಾಕ್ 3 ರಲ್ಲಿ ಕೆಲವು ನಿರ್ಬಂಧಗಳು ಮುಂದುವರಿಯುವ ಸಾಧ್ಯತೆಯಿದೆ.

ಶಾಲೆಗಳು ಮತ್ತು ಮೆಟ್ರೋ ರೈಲು ಸೇವೆಗಳು ದೇಶಾದ್ಯಂತ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕಾರ್ವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲೆಗಳನ್ನು ಪುನಃ ತೆರೆಯುವ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ರಾಜ್ಯಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. ಈ ವಿಷಯದ ಬಗ್ಗೆ ಪೋಷಕರಿಂದ ಪ್ರತಿಕ್ರಿಯೆ ಕೇಳಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಈ ಹಿಂದೆ ತಿಳಿಸಿದ್ದರು. ತರುವಾಯ, ಶಾಲೆಗಳನ್ನು ಮತ್ತೆ ತೆರೆಯಲು ಪೋಷಕರು ಒಲವು ತೋರುತ್ತಿಲ್ಲ ಎಂದು ಸಚಿವಾಲಯ ತಿಳಿಸಿದೆ.

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!