Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಪತ್ರಿಕೋದ್ಯಮದ ಉತ್ಸಾಹ ಪತ್ರಕರ್ತರಲ್ಲಿ ಪ್ರತಿದಿನವೂ ಚಿಗುರೊಡೆಯಬೇಕು: ಬಿ.ವಿ.ಮಲ್ಲಿಕಾರ್ಜುನ

ಪತ್ರಿಕೋದ್ಯಮದ ಉತ್ಸಾಹ ಪತ್ರಕರ್ತರಲ್ಲಿ ಪ್ರತಿದಿನವೂ ಚಿಗುರೊಡೆಯಬೇಕು: ಬಿ.ವಿ.ಮಲ್ಲಿಕಾರ್ಜುನ

ಹುಬ್ಬಳ್ಳಿ,ನ.15- ಪತ್ರಿಕೋದ್ಯಮದ ಉತ್ಸಾಹ ಪತ್ರಕರ್ತರಲ್ಲಿ ದಿನದಿಂದ ದಿನಕ್ಕೆ ವೃದ್ಧಿಸಬೇಕು. ಪತ್ರಕರ್ತರ ಕಾರ್ಯ ಸಮಾಜಿಕ ಕಳಕಳಿಯನ್ನು ಒಳಗೊಂಡಿರಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಐ ಎಫ್ ಡಬ್ಲೂ ಜೆ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮದ ಸೌಭಾಗ್ಯಯನ್ನು ಅನುಭವಿಸಿದಾಗ ಮಾತ್ರ ಪತ್ರಿಕೋದ್ಯಮದ ಜೀವನ ಸಾರ್ಥಕತೆ ಪಡೆಯಲು ಸಾಧ್ಯ. ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮ ಸಂಕಷ್ಟಕ್ಕೆ ಸಿಲುಕಿತ್ತಿದೆ. ಪ್ರತಿಯೊಬ್ಬರಲ್ಲಿಯೂ ಕೂಡ ಪತ್ರಿಕೋದ್ಯಮ ಆಸಕ್ತಿ ಹುಟ್ಟಿಸುತ್ತದೆ. ಆದರೇ ಅದರ ಒಳಗೆ ಕಾಲಿಟ್ಟ ಮೇಲೆಯೇ ಅದರ ನೋವು ನಲಿವುಗಳ ಅರ್ಥವಾಗುತ್ತದೆ ಎಂದರು.
ಪತ್ರಿಕೋದ್ಯಮ ಕ್ಷೇತ್ರವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳದೇ ಸಾರ್ವಜನಿಕ, ಸಾಮಾಜಿಕ ಜವಾಬ್ದಾರಿಗೆ ಬಳಸಿಕೊಂಡಾಗ ಮಾತ್ರ ಜೀವನ ಹಾಗೂ ವೃತ್ತಿ ಜೀವನ ಸುಂದರವಾಗಿ ಕಾಣಲು ಸಾಧ್ಯ. ಜನ ನಮ್ಮನ್ನು ಗುರುತಿಸುವಂತೆ ಜೀವನದಲ್ಲಿ ಹಾಗೂ ವೃತ್ತಿಯಲ್ಲಿ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು,ಐ ಎಫ್ ಡಬ್ಲೂ ಜೆ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣಪತಿ ಗಂಗೊಳ್ಳಿ, ವಿರೇಶ ಹಂಡಗಿ, ಸುಶೀಲೇಂದ್ರ ಕುಂದರಗಿ, ಲೋಚನೇಶ ಹೂಗಾರ, ರಾಜು ಮುದಗಲ್, ಪ್ರಕಾಶ ನೂಲ್ವಿ, ಮಲ್ಲಿಕಾರ್ಜುನ ಸಿದ್ದಣ್ಣವರ,ರಾಜು ವಿಜಾಪೂರ,ಜಗದೀಶ ಬುರ್ಲಬುಡ್ಡಿ ಕೃಷ್ಣ ದಿವಾಕರ, ಯಲ್ಲಪ್ಪಗೌಡ ಕುಂದಗೋಳ, ಗಿರೀಶ ಕುಲಕರ್ಣಿ,ಸಂತೋಷ ನರೆಗಲ್,ರುದ್ರೇಶ ಮುರನಾಳ, ಬಸವರಾಜ ಹೂಗಾರ,ರೋಹನ ಸೇನವಾಡಕರ ಸೇರಿದಂತೆ ಇತರರು ಇದ್ದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!