Hiring Reporter’s For more Information Contact Above Number 876 225 4007 . Program producer
Home / Breaking News / ಕನ್ನಡ ನಟನಿಗೆ ಬಿಗ್ ಬಿ ಪ್ರಶಂಸೆ

ಕನ್ನಡ ನಟನಿಗೆ ಬಿಗ್ ಬಿ ಪ್ರಶಂಸೆ

Spread the love

ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ ಎನ್ನುವ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ.

ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ 350ಕ್ಕೂ ಹಚ್ಚು ಚಿತ್ರಗಳ ಮೂಲಕ ರಸಿಕರನ್ನು ರಂಜಿಸುವ ಈ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲೆಯನ್ನು ದೇವರೆಂದು ನಂಬಿರುವ ವೈಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಿರಾದರ್​ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಇತ್ತೀಚೆಗಷ್ಟೆ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ.
ಭಾರತೀಯನಿಗೆ ಈ ಗೌರವ ಸಿಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!